ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಾರಿನಲ್ಲಿ ಹೋಗುವಾಗ ರೋಡಿನಲ್ಲಿ ಪ್ಲಾಸ್ಟಿಕ್ ಕವರಿನಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ರಸ್ತೆಗಳು ಇರೋದು ನಿಮ್ಮ ಕಸ ಹಾಕಲು ಅಲ್ಲ ಬಿ ಕೇರ್ ಫುಲ್ ಎಂದು ಅನುಷ್ಕಾ ಖಡಕ್ ವಾರ್ನಿಂಗ್ ನೀಡಿದ್ದಾರೆ.
‘
ಅನುಷ್ಕಾ ಶರ್ಮಾ ಕಾರಿನಲ್ಲಿ ಹೋಗುತ್ತಿದ್ದಾಗ ಪಕ್ಕದಲ್ಲೇ ಹೋಗುತ್ತಿದ್ದ ವ್ಯಕ್ತಿಯೊಬ್ಬ ಕಾರಿನಿಂದ ಪ್ಲಾಸ್ಟಿಕ್ ಕವರ್ ಎಸೆದಿದ್ದಾನೆ. ಇದನ್ನು ಕಂಡ ಅನುಷ್ಕಾ ಶರ್ಮಾ ತನ್ನ ಕಾರಿನ ಕಿಟಕಿ ತೆಗೆದು ಆ ವ್ಯಕ್ತಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ.
ರಸ್ತೆಯಲ್ಲಿ ಕಸವನ್ನು ಯಾಕೆ ಎಸುತ್ತಿದ್ದೀಯಾ? ದಯವಿಟ್ಟು ಎಚ್ಚರದಿಂದ ಇರು. ನೀನು ಪ್ಲಾಸ್ಟಿಕ್ ಕವರ್ ಗಳನ್ನು ಈ ರೀತಿ ರಸ್ತೆಯ ಮೇಲೆ ಎಸೆಯುವ ಹಾಗೇ ಇಲ್ಲ ಎಂದು ಅನುಷ್ಕಾ ಶರ್ಮಾ ಆ ವ್ಯಕ್ತಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಅನುಷ್ಕಾ ಪತಿ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, “ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಸ ಎಸೆಯುತ್ತಿರುವುದನ್ನು ನೋಡಿ ಅನುಷ್ಕಾ ಅವನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ದುಬಾರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು, ಅವರ ಮೆದುಳು ಕೆಲಸ ಮಾಡುವುದಿಲ್ಲ. ಇಂತಹ ಜನರು ನಮ್ಮ ದೇಶವನ್ನು ಸ್ವಚ್ಛತೆಯಿಂದ ಇಡುತ್ತಾರಾ? ನೀವು ಕೂಡ ಈ ರೀತಿ ಆಗುವುದನ್ನು ನೋಡಿದ್ದರೆ, ಹೀಗೆ ಮಾಡಿ ಜಾಗೃತಿ ಮೂಡಿಸಿ ಎಂದು ಪೋಸ್ಟ್ ಮಾಡಿದ್ದಾರೆ.
ಅನುಷ್ಕಾ ಶರ್ಮಾ ಅವರ ಈ ವಿಡಿಯೋ ನೋಡಿ ನಿರ್ದೇಶಕ ಕರಣ್ ಜೋಹರ್, ಇದು ಈ ದಿನದ ಆದೇಶ. ಒಳ್ಳೆ ಕೆಲಸ ಮಾಡಿದೆ ಅನುಷ್ಕಾ ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ವಿರಾಟ್ ಕೊಹ್ಲಿ ವಿರುದ್ಧ ಹಾಸ್ಯವಾಗಿ ಟ್ವೀಟ್ ಮಾಡಿದ್ದಾರೆ.
ಆ ಟ್ವೀಟ್ ಗಮನಿಸಿದ ವಿರಾಟ್, “ಇಂತಹ ಕೆಲಸ ಮಾಡಲು ಬರದ ಹಲವಾರು ಮಂದಿಗೆ ಇದು ಹಾಸ್ಯಮಯವಾಗಿ ಕಾಣುತ್ತದೆ. ಈಗಿನ ಕಾಲದಲ್ಲಿ ಜನಗಳಿಗೆ ಎಲ್ಲವು ಹಾಸ್ಯವಾಗಿರಬೇಕು. ನಾಚಿಕೆಯಾಗಬೇಕು ಎಂದು ಪ್ರತಿಕ್ರಿಯಿಸುವ ಮೂಲಕ ಆ ವ್ಯಕ್ತಿಗೆ ಖಡಕ್ ಉತ್ತರ ನೀಡಿದ್ದಾರೆ.
ಸದ್ಯ ಅನುಷ್ಕಾ ಶರ್ಮಾ ಆ ವ್ಯಕ್ತಿಗೆ ಬೈಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಹಲವಾರು ಅನುಷ್ಕಾಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/imVkohli/status/1007952358310055937

Leave a Reply