ಕಾಂಗ್ರೆಸ್‌ನವ್ರು ಹಾದಿ ಬೀದೀಲಿ ಜೋಗುಳ ಹಾಡಿಕೊಂಡು ತಿರುಗ್ತಾರೆ: ಕಾರಜೋಳ

ಹಾವೇರಿ: ದೀನ ದಲಿತರ ಉದ್ಧಾರ ಮಾಡುತ್ತೇವೆ ಎಂದು ಹೇಳಿ ಕಾಂಗ್ರೆಸ್ (Congress) ಅವಸಾನ ತಲುಪಿದೆ. ಕಾಂಗ್ರೆಸ್‌ನವರು ತಿಪ್ಪರಲಾಗ ಹಾಕಿದರೂ ಗೆಲ್ಲೋಕೆ ಸಾಧ್ಯವಿಲ್ಲ. ಈ ಬಾರಿಯ ಚುನಾವಣೆಯಲ್ಲೂ (Assembly Election) ಬಿಜೆಪಿ (BJP) ಅಧಿಕಾರಕ್ಕೆ ಬರುತ್ತದೆ ಎಂದು ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದ್ದಾರೆ.

ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಜನರನ್ನು ಹುರಿದುಂಬಿಸುವ ಕೆಲಸ ಮಾಡುತ್ತಾ ಇದ್ದೇವೆ. ಸ್ವಾತಂತ್ರ‍್ಯ ಬಂದ ಬಳಿಕ ನೆಹರೂ, ಇಂದಿರಾ ಗಾಂಧಿ ಕಾಲ ಬಿಟ್ಟರೆ ಸ್ಪಷ್ಟ ಬಹುಮತದಿಂದ ಸರ್ಕಾರ ರಚನೆ ಮಾಡಿದ್ದು ಮೋದಿಯವರು. ಸುಳ್ಳು ಆರೋಪ ನಾವು ಮಾಡಲ್ಲ. ಕಾಂಗ್ರೆಸ್‌ನವರು ಕೆಲವರನ್ನು ಉಪಯೋಗ ಮಾಡಿಕೊಂಡು ಆರೋಪ ಮಾಡುತ್ತಾ ಇದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ: ಆರ್.ಅಶೋಕ್

ಕಾಂಗ್ರೆಸ್‌ನವರು 60 ವರ್ಷ ಮಾಡಿದ್ದು ಹೇಳಿ ಎಂದರೆ ಏನೂ ಹೇಳಲ್ಲ. ಕೆಂಪಣ್ಣನನ್ನು ಹಿಡಿದುಕೊಂಡು ಬಿಳಿ ಹಾಳೆ ಅರ್ಜಿ ಕೊಡಿಸಿದ್ದಾರೆ. ಕಾಂಗ್ರೆಸ್‌ನವರು ಹಾದಿ ಬೀದಿಯಲ್ಲಿ ಜೋಗುಳ ಹಾಡಿಕೊಂಡು ತಿರುಗುತ್ತಾರೆ. 94 ವರ್ಷದ ಶಾಮನೂರು, 84 ವರ್ಷದ ಖರ್ಗೆ, 78 ವರ್ಷದ ಸಿದ್ದರಾಮಯ್ಯ, ಇವರ ಜೊತೆ ಡಿಕೆ ಶಿವಕುಮಾರ್ ಅಧಿಕಾರಕ್ಕಾಗಿಯೇ ಹುಟ್ಟಿದ್ದಾರೆ ಎನ್ನುವ ತರ ನಡೆದುಕೊಳ್ಳುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಜೆಡಿಎಸ್ ಒಂದು ಪುಟ್ಗೋಸಿ ಪಕ್ಷ – ಮಾಜಿ ಸಚಿವ ನರೇಂದ್ರ ಸ್ವಾಮಿ ಅವಾಜ್

Comments

Leave a Reply

Your email address will not be published. Required fields are marked *