ಪರಿಸ್ಥಿತಿಯನ್ನು ಕೆರಳಿಸಲು ಬಂದಿದ್ದಾರೆ – ತೇಜಸ್ವಿ ಸೂರ್ಯ ಮೇಲೆ ಅಶೋಕ್ ಗೆಹ್ಲೋಟ್ ಕಿಡಿ

ಜೈಪುರ: ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಕರೌಲಿಗೆ ಬಂದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಲು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಕಿಡಿಕಾರಿದ್ದಾರೆ.

ತೇಜಸ್ವಿ ಸೂರ್ಯ ಹಿಂಸಾಚಾರ ಪೀಡಿತ ಕರೌಲಿಗೆ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಹೆಸರು ತೇಜಸ್ವಿ ಸೂರ್ಯ ಆದರೆ ಅವರು ಇಲ್ಲಿಗೆ ಬಂದಿದ್ದನ್ನು ನೋಡಿ, ಕರೌಲಿಯಲ್ಲಿ ನಡೆದ ಘಟನೆ ದುರದೃಷ್ಟಕರ. ಈ ಜನರು ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಲು ಬಂದಿದ್ದಾರೆ ಎಂದು ನಾನು ಈಗಾಗಲೇ ಹೇಳಿದ್ದೇನೆ. ಕರೌಲಿಯಂತಹ ಘಟನೆಗಳು ನಡೆಯಬಾರದು ಎಂದು ಹೇಳಿದರು. ಇದನ್ನೂ ಓದಿ: ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್

ಇತರ ರಾಜ್ಯಗಳಲ್ಲಿ ಗಲಭೆಗಳು ನಡೆದಾಗ, ಸರ್ಕಾರಗಳು ಮನೆಗಳನ್ನು ನೆಲಸಮಗೊಳಿಸಿದವು. ಯಾವುದೇ ತನಿಖೆಯಿಲ್ಲದೆ ಇಂತಹ ಕ್ರಮ ಕೈಗೊಳ್ಳಲು ಪ್ರಧಾನಿ ಅಥವಾ ಸಿಎಂಗೆ ಯಾವುದೇ ಹಕ್ಕಿಲ್ಲ. ಹಾಗೆ ಮಾಡಲು ಕಾನೂನಿಗೆ ಮಾತ್ರ ವಿಶೇಷ ಅಧಿಕಾರವಿದೆ. ಅದು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಒಂದೇ ಒಂದು ಮಾತು – ಈಶ್ವರಪ್ಪ ದಿಢೀರ್‌ ರಾಜೀನಾಮೆ

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ, ಪಕ್ಷದ ರಾಜಸ್ಥಾನ ಮುಖ್ಯಸ್ಥ ಸತೀಶ್ ಪೂನಿಯಾ ಮತ್ತು ಇತರರನ್ನು ಬುಧವಾರ ಹಿಂಸಾಚಾರ ಪೀಡಿತ ಕರೌಲಿಗೆ ಭೇಟಿ ನೀಡುವುದನ್ನು ತಡೆಯಲಾಯಿತು. ಅವರನ್ನು ದೌಸಾ-ಕರೌಲಿ ಗಡಿಯಲ್ಲಿ ತಡೆಹಿಡಿಯಲಾಯಿತು. ಆದರೆ ಹಿಂದೂ ಹೊಸ ವರ್ಷವನ್ನು ಆಚರಿಸಲು ನಡೆಸುತ್ತಿದ್ದ ಬೈಕ್ ರ್ಯಾಲಿಯಲ್ಲಿ ಕಲ್ಲು ತೂರಾಟ ನಡೆಸಿದ ನಂತರ ಭುಗಿಲೆದ್ದ ಏಪ್ರಿಲ್ 2 ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಲು ಅವರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಹಿಂಸಾಚಾರದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕರೌಲಿ ಗಲಭೆಗಳು ರಾಜಸ್ಥಾನದಲ್ಲಿ ಸ್ಪಷ್ಟ ಕಾನೂನುಬಾಹಿರತೆಯನ್ನು ಸೂಚಿಸುತ್ತವೆ. ರಾಮನವಮಿ ಶೋಭಾ ಯಾತ್ರೆಗೆ ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನ ಮತ್ತು ಗಲಭೆಕೋರರರ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗದಿರುವುದು ಶೋಚನೀಯ ಎಂದು ಬಿಜೆಪಿಯ ಯುವ ಘಟಕವಾದ ಬಿಜೆವೈಎಂ ಮುಖ್ಯಸ್ಥರೂ ಆಗಿರುವ ಸೂರ್ಯ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *