6 ದಿನ ನಡೆಯಲಿದೆ ಕತ್ರಿನಾ, ವಿಕ್ಕಿ ಮದುವೆ – ಯಾರಿಗೆಲ್ಲ ಇದೆ ಆಮಂತ್ರಣ?

ಮುಂಬೈ: ಬಾಲಿವುಡ್ ಲವ್ ಬರ್ಡ್ಸ್ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಕಾರ್ಯಕ್ರಮ 6 ದಿನ ನಡೆಯಲಿದೆ. ಮದುವೆ ಕಾರ್ಯಕ್ರಮಕ್ಕೆ ಆಯ್ದ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ವಿಕ್ಕಿ ಮತ್ತು ಕತ್ರಿನಾ ಕೈಫ್ ಡಿಸೆಂಬರ್‌ನಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಸಿಕ್ಸ್ ಸೆನ್ಸ್ ಫೋರ್ಟ್ ಹೋಟೆಲ್‍ನಲ್ಲಿ ವಿವಾಹವಾಗಲಿದ್ದು, ಡಿಸೆಂಬರ್ 7 ರಿಂದ 12 ರವರೆಗೆ ಮದುವೆ ನಡೆಯಲಿದೆ ಎಂಬ ಸುದ್ದಿ ಕೇಳುಬರುತ್ತಿದೆ. ಇದನ್ನೂ ಓದಿ: ಭಗವಂತನ ಮೇಲೆ ಕೋಪ ಬರುತ್ತಿದೆ: ಸಾಯಿ ಕುಮಾರ್

ವಿಕ್ಕಿ ಹಿಂದೂ, ಕತ್ರಿನಾ ಮುಸ್ಲಿಂ. ಈ ಹಿನ್ನೆಲೆ ಇವರ ಮದುವೆ ಎರಡೂ ಧರ್ಮದ ಪ್ರಕಾರ ನಡೆಯಲಿದೆ ಎನ್ನಲಾಗುತ್ತಿದೆ. ಹೀಗಾಗಿ, ಆರು ದಿನಗಳ ಕಾಲ ಮದುವೆ ಕಾರ್ಯಗಳನ್ನು ಆಯೋಜನೆ ಮಾಡಲಾಗಿದೆ. ವಿವಾಹ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿಯಾಗಲಿದ್ದು, ಸಾಕಷ್ಟು ಭದ್ರತೆ ಕೂಡ ಒದಗಿಸಲಾಗುತ್ತಿದೆ.

ಕತ್ರಿನಾ ಅವರ ಈ ಬಹು ನಿರೀಕ್ಷಿತ ಮದುವೆಗೆ ಕರಣ್ ಜೋಹರ್, ಅಲಿ ಅಬ್ಬಾಸ್ ಜಾಫರ್, ಕಬೀರ್ ಖಾನ್, ಮಿನಿ ಮಾಥುರ್, ರೋಹಿತ್ ಶೆಟ್ಟಿ, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ವರುಣ್ ಧವನ್ ಮತ್ತು ನತಾಶಾ ದಲಾಲ್ ದಂಪತಿ ಮುಂತಾದವರು ಅತಿಥಿಗಳ ಪಟ್ಟಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ವಿಕ್ಕಿ ಮತ್ತು ಕತ್ರಿನಾ ಅವರ ಮದುವೆ ಹಿನ್ನೆಲೆ ದುಬಾರಿ ಕಾರುಗಳನ್ನು ಬಾಡಿಗೆ ತೆಗೆದುಕೊಂಡಿದ್ದು, ಇವರ ಮದುವೆಯ ದಿನಾಂಕದ ಸಮೀಪದಲ್ಲಿ ಜೈಪುರದಲ್ಲಿ ಚಿತ್ರೀಕರಣ ಮಾಡಲು ಯೋಜಿಸಿರುವ ಸಿನಿಮಾ ಮಂದಿಗೆ ಬಾಡಿಗೆ ಕಾರುಗಳ ಕೊರತೆ ಎದುರಾಗಿದೆ. ಕತ್ರಿನಾ ತಮ್ಮ ಮಾಜಿ ಪ್ರೇಮಿಗಳಾದ ಸಲ್ಮಾನ್ ಮತ್ತು ರಣಬೀರ್ ಅವರನ್ನೂ ಮದುವೆಗೆ ಆಮಂತ್ರಿಸುತ್ತಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ. ಇದನ್ನೂ ಓದಿ: MLC ಚುನಾವಣೆಗೆ ಜೆಡಿಎಸ್‍ನಿಂದ ಭವಾನಿ ರೇವಣ್ಣ, ಸೂರಜ್ ರೇವಣ್ಣ ಬಹುತೇಕ ಫಿಕ್ಸ್

Comments

Leave a Reply

Your email address will not be published. Required fields are marked *