‘ಬಿಗ್ ಬಾಸ್’ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಜೊತೆ ಸ್ಪರ್ಧಿಸಲಿದ್ದಾರೆ ಈ ಬೆಡಗಿಯರು

ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ಶೋ ಶುರುವಾಗಲಿದೆ. ಈ ಬಾರಿ ದೊಡ್ಮನೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಲೆಕ್ಕಾಚಾರ ಕೂಡ ಶುರುವಾಗಿದೆ. ಕ್ಷಣ ಕ್ಷಣದ ಅಪ್ ಡೇಟ್ ಕೊಡುತ್ತಿರುವ ಪಬ್ಲಿಕ್ ಟಿವಿ ಡಿಜಿಟೆಲ್ ಗೆ ಹಲವು ಎಕ್ಸ್ ಕ್ಲೂಸಿವ್ ಸಂಗತಿಗಳು ದೊರೆತಿವೆ. ನಿನ್ನೆಯಿಂದಲೇ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ಚಿತ್ರೀಕರಣವಾಗಿದ್ದು, ಈಗಾಗಲೇ ಮನೆಯಲ್ಲಿ 16 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಅವೆಲ್ಲವೂ ಶೂಟಿಂಗ್ ಆಗಿದೆ. ಈ ಬಾರಿ ಕೆಲ ಅಚ್ಚರಿಯ ವ್ಯಕ್ತಿಗಳು ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ.

ನಾನೆಂದರೆ ನಂಬರ್, ನಂಬರ್ ಅಂದರೆ ನಾನು ಎಂದು ಅಂಕಿಸಂಖ್ಯೆ ಭವಿಷ್ಯ ಹೇಳುವ ಆರ್ಯವರ್ಧನ್ ಗುರೂಜಿ ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರಂತೆ. ಇವರೊಂದಿಗೆ ಮಿಮಿಕ್ರಿಗೆ ಹೆಸರಾಗಿರುವ ಗೋಪಿ ಕೂಡ ಬಲಗಾಲಿಟ್ಟು ಮನೆ ಒಳಗೆ ಹೋಗಿದ್ದಾರೆ. ರಾಜಕಾರಣಗಳ ಮತ್ತು ಸಿನಿಮಾ ನಟರ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ಫೇಮಸ್ ಆಗಿರುವ ಗೂಪಿ, ಈ ಬಾರಿ ಮನೆಯಲ್ಲಿ ಎಲ್ಲರನ್ನೂ ರಂಜಿಸಲಿದ್ದಾರೆ. ಇದನ್ನೂ ಓದಿ:ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್

ನಟ ಕಂ ನಿರ್ದೇಶಕ ನವೀನ್ ಕೃಷ್ಣ ಕೂಡ ದೊಡ್ಮೆನೆ ಪ್ರವೇಶ ಮಾಡಿದ್ದಾರೆ. ಕಲಾವಿದರ ಕುಟುಂಬದಿಂದ ಬಂದಿರುವ ನವೀನ್ ಕೃಷ್ಣ, ಕಾಮಿಡಿ ಮತ್ತು ಗಂಭೀರ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕೆಲ ವರ್ಷಗಳಿಂದ ಬಿಗ್ ಬಾಸ್ ಲಿಸ್ಟ್ ನಲ್ಲಿ ಇವರ ಹೆಸರು ಕೇಳಿ ಬರುತ್ತಿತ್ತು, ಈ ಬಾರಿ ಅದು ನಿಜವಾಗಿದೆ. ನಟ, ನಿರ್ದೇಶಕ ಮತ್ತು ಖಾಸಗಿ ಎಫ್ ಎಂ ವಾಹಿನಿಯಲ್ಲಿ ಕೆಲಸ ಮಾಡುವ ರೂಪೇಶ್ ಶೆಟ್ಟಿ ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕವೇ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ, ಸದಾ ನಗುವ ಬೆಡಗಿ ಭೂಮಿಕಾ ಬಸವರಾಜ್ ಕೂಡ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೊತೆಗೆ ಪುಟ್ಟ ಗೌರಿಯ ಮದುವೆ ಸೀರಿಯಲ್ ಖ್ಯಾತಿಯ ಸಾನ್ವಿ ಕೂಡ ನಿನ್ನೆ ಚಿತ್ರೀಕರಣ ಮುಗಿಸಿಕೊಂಡು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಖಾಸಗಿ  ವಾಹಿನಿಯ ನಿರೂಪಕರೊಬ್ಬರಿಗೂ ಈ ಬಾರಿ ಮನೆಗೆ ಹೋಗಲು ಅನುಮತಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತೆ ಕೆಚ್ಚೆದೆಯ ಕನ್ನಡತಿ ಅಕ್ಕ ಅನು, ರಿಯಾಲಿಟಿ ಶೋ ಸಿಂಗರ್ ಆಶಾ ಭಟ್, ನಟ ತರುಣ್ ಚಂದ್ರ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಮತ್ತು ಕಾಫಿ ನಾಡು ಚಂದ್ರು ಕೂಡ ಈ ಬಾರಿ ಮನೆಯಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಈ ಲಿಸ್ಟ್ ಬಹುತೇಕ ಖಚಿತ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *