ಲಕ್ನೋ: ಮದುವೆ ವೇಳೆ ಮ್ಯೂಸಿಕ್ ಹಾಕಿ ಸಂಭ್ರಮಿಸುವುದು ಸಾಮಾನ್ಯ. ಅನೇಕ ಮಂದಿ ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ ಇಲ್ಲೊಂದು ಮದುವೆ ಮೆರವಣಿಗೆಯಲ್ಲಿ ಜೋರಾದ ಮ್ಯೂಸಿಕ್ ಸದ್ದಿಗೆ ಗಾಬರಿಗೊಂಡ ಕುದುರೆಯೊಂದು ಜನರನ್ನು ತನ್ನ ಪಾದಗಳಿಂದ ತುಳಿದು ಓಡಿದೆ.

ಹೌದು, ಉತ್ತರ ಪ್ರದೇಶದ ಹಮೀರ್‍ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆ ಮೆರವಣಿಗೆಯಲ್ಲಿ ಧ್ವನಿವರ್ಧಕಗಳನ್ನು ಜೋಡಿಸಿ 1996ರಲ್ಲಿ ತೆರೆಕಂಡಿದ್ದ ರಾಜಾ ಹಿಂದೂಸ್ತಾನಿ ಸಿನಿಮಾದ ತೇರೆ ಇಷ್ಕ್ ಮೇ ನಾಚೇಂಗೆ ಎಂಬ ಫೇಮಸ್ ಸಾಂಗ್‍ಗೆ ಯುವಕರು, ನೋಟುಗಳನ್ನು ಎಸೆಯುತ್ತಾ ನೃತ್ಯ ಮಾಡುತ್ತಿರುತ್ತಾರೆ. ಈ ವೇಳೆ ಯುವಕರ ಮಧ್ಯೆಯೇ ಇದ್ದ ಕುದುರೆ, ಮ್ಯೂಸಿಕ್ ಸದ್ದಿಗೆ ಗಾಬರಿಗೊಂಡು ಎಗರುತ್ತಾ, ತನ್ನ ಪಾದಗಳಿಂದ ಜನರನ್ನು ತುಳಿದುಕೊಂಡು ಓಡಿಹೋಗಿದೆ. ಇದನ್ನೂ ಓದಿ: ಸತ್ತೇ ಹೋದನೆಂದು ಭಾವಿಸಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ – ಚಿಕ್ಕಮಗಳೂರಿನಲ್ಲೊಂದು ಪ್ರಹಸನ
ಬುಂದೇಲ್‍ಖಂಡ್ ಪ್ರದೇಶದ ಹಲವಾರು ಭಾಗಗಳಲ್ಲಿ ಕುದುರೆಗಳಿಂದ ನೃತ್ಯ ಮಾಡಿಸುವ ಸಂಪ್ರದಾಯವಿದೆ. ಅದೇ ರೀತಿ ಕುದುರೆಯಿಂದ ನೃತ್ಯ ಮಾಡಿಸಲು ಮಾಲೀಕರು ಪ್ರಯತ್ನಿಸಿದ್ದರು. ಆದರೆ ಜೋರಾದ ಮ್ಯೂಸಿಕ್ ಶಬ್ಧಕ್ಕೆ ಕುದುರೆ ನಿಯಂತ್ರಣ ತಪ್ಪಿ ಹೋಯಿತು. ಈ ವೇಳೆ ಕುದುರೆ ಕಾಲ್ತುಳಿತದಿಂದ ಪಾರಾಗಲು ಜನರು ಹರಸಾಹಸ ಪಟ್ಟಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ‘ಶೈಕ್ಷಣಿಕ ದತ್ತು ಕಾರ್ಯಕ್ರಮ’ ಅನುಷ್ಠಾನ

Leave a Reply