ಶೂ ಇಲ್ಲದ್ದಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ಓಡಿ 3 ಚಿನ್ನದ ಪದಕ ಗೆದ್ದ ಬಾಲಕಿ

ಮನಿಲಾ: ಫಿಲಿಪೈನ್ಸ್‍ನ 11 ವರ್ಷದ ಕ್ರೀಡಾಪಟು ಒಬ್ಬಳು ಶೂ ಇಲ್ಲದ್ದಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ಓಡಿ 3 ಚಿನ್ನ ಪದಕ ಗೆದ್ದಿದ್ದಾಳೆ. ಸದ್ಯ ಈ ಬಾಲಕಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇಲೊಯಿಲೊ ಪ್ರಾಂತ್ಯದ ಸ್ಥಳೀಯ ಶಾಲೆಯಲ್ಲಿ ಇಂಟರ್ ಸ್ಕೂಲ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಇದರಲ್ಲಿ 11 ವರ್ಷದ ರಿಯಾ ಬುಲೋಸ್ 400 ಮೀ, 800 ಮೀ ಮತ್ತು 1500 ಮೀ ಓಟಗಳಲ್ಲಿ ಭಾಗವಹಿಸಿ, ಶೂಗಳಿಲ್ಲದೆ ಓಡಿದ್ದಳು. ಆದರೆ ಮೂರು ವಿಭಾಗಗಳಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಬಾಲಕಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ.

ರಿಯಾಳ ಜಯವನ್ನು ಇಲಾಯ್ಲೊ ಸ್ಪೋಟ್ರ್ಸ್ ಕೌನ್ಸಿಲ್ ಮೀಟ್ ಕೋಚ್ ಪ್ರೆಡೆರಿಕ್ ಬಿ. ವೇಲೆನ್‍ಜುವೆಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಿಯಾ ಆಟದ ವೇಳೆ ಶೂಗಳನ್ನು ಧರಿಸುವುದಿಲ್ಲ. ಬದಲಿಗೆ ತನ್ನ ಪಾದಗಳಿಗೆ ಬ್ಯಾಂಡೇಜ್ ಧರಿಸಿದ್ದಾಳೆ. ಅಷ್ಟೇ ಅಲ್ಲದೆ ಪಾದಗಳಿಗೆ ಶೂಗಳಂತೆ ಸುತ್ತಿಕೊಂಡ ಬ್ಯಾಂಡೇಜ್ ಮೇಲೆ ನೈಕ್ ಎಂದು ಬರೆದುಕೊಂಡಿದ್ದಾಳೆ.

ವೇಲೆನ್‍ಜುವೆಲಾ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೂರಾರು ನೆಟ್ಟಿಗರು ರಿಯಾಳಿಗೆ ಹೊಸ ಶೂಗಳನ್ನು ನೀಡಲು ಮುಂದಾದರು. ಬ್ಯಾಸ್ಕೆಟ್‍ಬಾಲ್ ಅಂಗಡಿಯೊಂದರ ಮಾಲೀಕರು ಟ್ವಿಟ್ ಮೂಲಕ ಬಾಲಕಿಯ ಶೂ ಸೈಜ್ ಕೇಳಿ ಸಹಾಯ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *