ಕ್ಷೇತ್ರದಲ್ಲಿ ಸಿಂಪತಿ ಇದೆ, ನನಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ: ಅಜ್ಜಂಪೀರ್ ಖಾದ್ರಿ

– ಹಾವೇರಿ ಜಿಲ್ಲೆಯ ಕೈನಾಯಕರು ಬಿಜೆಪಿ ಬಿ ಟೀಮ್

ಹಾವೇರಿ: ನಾನು ಸಿಎಂ ಬೊಮ್ಮಾಯಿ (Basavaraj Bommai) ವಿರುದ್ಧ ನಿಲ್ಲೋಕೆ ವೀಕ್ ಅಂತಾ ಸಲೀಂ ಅಹ್ಮದ್ ಹೇಳುತ್ತಾರೆ. ಹಾಗಾದ್ರೆ ಅವರೇ ಬಂದು ನಿಲ್ಲಲಿ. ನಾನೇ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸ್ತೀವಿ. ಅವರಂತೆ ಓರ್ವ ಅಲ್ಪ ಸಂಖ್ಯಾತನಾಗಿ ಇನ್ನೊಬ್ಬ ಅಲ್ಪಸಂಖ್ಯಾತನನ್ನು ತುಳಿಯಲ್ಲ. ಶಿಗ್ಗಾಂವಿ ಕ್ಷೇತ್ರ (Shiggaon Constituency)ದ ಟಿಕೆಟ್ ಹಂಚಲು ನಮ್ಮ ಜಿಲ್ಲೆಯ ಶಾಸಕರು ಓಡಾಡುತ್ತಿದ್ದಾರೆ. ಅವರೇನು ಶಾಹಾಜಿ ಮಾನ್ ಬುಕಾರಿ ನಾ..?. ಮೊದಲು ಅವರದ್ದು ಅವರು ನೊಡ್ಕೊಳ್ಳಲಿ ಎಂದು ಹಾವೇರಿ ಜಿಲ್ಲೆಯ ಕೈ ನಾಯಕರ ವಿರುದ್ಧ ಅಜ್ಜಂಪೀರ್ ಖಾದ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಜ್ಜಂಪೀರ್ ಖಾದ್ರಿ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್‍ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಶಿಗ್ಗಾಂವಿಗೆ ಬಂದು ರಾಜಕಾರಣ ಮಾಡಿ ಬಿಜೆಪಿಗೆ ಬೆಂಬಲಿಸುತ್ತಾರೆ. ಪರೋಕ್ಷವಾಗಿ ಹಾವೇರಿ ಜಿಲ್ಲೆಯ ಏಕೈಕ ಕೈ ಶಾಸಕ ಶ್ರೀನಿವಾಸ್ ಮಾನೆ ವಿರುದ್ಧ ಕಿಡಿಕಾರಿದ್ದಾರೆ. ಡಿ.ಕೆ ಶಿವಕುಮಾರ್ (D.K Shivakumar) ರಾಜ್ಯ ಸುತ್ತಿ ಪಕ್ಷ ಕಟ್ಟುತ್ತಿದ್ದಾರೆ. ಸಿದ್ದರಾಮಯ್ಯ (Siddaramaiah) ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಜಮೀರ್ ಅಹ್ಮದ್ ಸಾಹೇಬ್ರು ಎಲ್ಲರ ಕಾಲು ಬಿಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಇಷ್ಟೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಒಡೆದು ಜಿಲ್ಲೆಯ ಕೈ ನಾಯಕರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಇವರೆಲ್ಲ ಬಿಜೆಪಿ (BJP) ಯ ಬಿ ಟಿಂ ಎಂದು ಹಾವೇರಿ ಕೈ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿಯಿಂದ ಬಂದವನಿಗೆ ಶಿಗ್ಗಾಂವಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಮಾಡ್ತಾರೆ ಎಂದರು.

ನನ್ನ ಜೊತೆ ಫೋಟೋ ತೆಗೆದುಕೊಂಡು ನನ್ನ ಜೊತೆ ಓಡಾಡಿದ್ದಕ್ಕೆ ಟಿಕೆಟ್ ಕ್ಯಾನ್ಸಲ್ ಮಾಡಿ. ಸವಣೂರು ಪುರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಂದವರಿಗೆ ಟಿಕೆಟ್ ಕೊಡುತ್ತಾರೆ. ಈ ಸಲೀಂ ಅಹ್ಮದ್ (Saleem ahmed) ನಡೆಯಿಂದ ಹಾವೇರಿ ಜಿಲ್ಲೆಯಲ್ಲಿ ಕೈ ಕಾರ್ಯಕರ್ತರಿಗೆ ಕಷ್ಟ ಆಗಿದೆ. ನನಗೆ ಟಿಕೆಟ್ ಕೊಡಬೇಡಿ ಅಂತಾ ನಮ್ಮ ನಾಯಕರಿಗೆ ಹೇಳ್ತಾರೆ. ಹಾಗಾದ್ರೆ ಅವರೇ ಬಂದು ನಿಲ್ಲಲಿ ಅವರನ್ನು ಗೆಲ್ಲಿಸಿಕೊಂಡು ಬರುತ್ತೀನಿ ಎಂದರು. ಇದನ್ನೂ ಓದಿ: ಕೋಲಾರ, ವರುಣಾ ಅಲ್ಲ – ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ?

ಅಲ್ಲಾನ ಮೇಲೆ ಆಣೆ ಮಾಡ್ತೀನಿ ಸಲೀಂ ಅಹ್ಮದ್ ನನ್ನು ಗೆಲ್ಲಿಸಿಕೊಂಡು ಬರದೆ ಇದ್ರೆ, ಬೀದಿಯಲ್ಲಿ ಗುಂಡು ಹಾರಿಸಿಕೊಂಡು ಸಾಯ್ತೀನಿ. ಮುಖ್ಯಮಂತ್ರಿಯನ್ನು ಈ ಬಾರಿ ಸೋಲಿಸಬೇಕೆಂದು ಕ್ಷೇತ್ರದ ಜನ ತೀರ್ಮಾನಿಸಿದ್ದಾರೆ. ನನಗೆ ಟಿಕೆಟ್ ಕೊಡಿ ಎಂದು ಸಿದ್ಧರಾಮಯ್ಯ, ಡಿ.ಕೆ ಸಾಹೇಬ್ರಿಗೆ ಕೈ ಮುಗಿದು ಕೇಳ್ತೀನಿ. ಮುಖ್ಯಮಂತ್ರಿಗಳ ಚುನಾವಣೆಯಲ್ಲಿ ಸೋತಿರುವ ಇತಿಹಾಸ ರಾಜ್ಯದಲ್ಲಿ ಇದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಜ್ಜಂಪೀರ್ ಖಾದ್ರಿ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *