ವಿದ್ಯುತ್ ಕಂಪನಿಗಳ ಖಾಸಗೀಕರಣ ಇಲ್ಲ: ಸುನೀಲ್ ಕುಮಾರ್

SUNIL KUMAR

ಚಾಮರಾಜನಗರ/ಮೈಸೂರು: ವಿದ್ಯುತ್ ನಿಗಮಗಳ ಖಾಸಗೀಕರಣ ಸರ್ಕಾರದ ಮುಂದೆ ಇಲ್ಲ. ಕೇಂದ್ರದ ಬಿಲ್ ಬಗ್ಗೆ ನನಗೆ ಮಾಹಿತಿ ಇಲ್ಲ. ವಿದ್ಯುತ್ ದರ ಏರಿಕೆ ಕೂಡ ಸರ್ಕಾರದ ಕೈಯಲ್ಲಿ ಇಲ್ಲ. ಇದು ವಿದ್ಯುತ್ ಸರಬರಾಜು ಮಾಡುವವರ ತೀರ್ಮಾನ. ಇದರ ಬಗ್ಗೆ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುವುದಿಲ್ಲ. ವಿದ್ಯುತ್ ಕಂಪನಿಗಳ ಖಾಸಗೀಕರಣ ಇಲ್ಲವೆಂದು ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಬಗ್ಗೆ ಯತ್ನಾಳ್ ಕೀಳುಮಟ್ಟದ ಪದ ಬಳಕೆ ವಿಚಾರವಾಗಿ ಮಾತನಾಡಿ, ಟೀಕೆ ಮಾಡುವ ಭರದಲ್ಲಿ ಯಾರೂ ಎಲ್ಲೆ ಮೀರಬಾರದು. ನಾನು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದೇನೆ. ಈ ವಿಚಾರವನ್ನು ಅವರ ಬಳಿಯೇ ಕೇಳಬೇಕು ಎಂದರು. ಇದನ್ನೂ ಓದಿ: ತಿರುಪತಿಗೆ ಭೇಟಿ ನೀಡಿದ ಮಾಜಿ ವಿಧಾನಪರಿಷತ್ ಶಾಸಕ ಡಾ.ಟಿ.ಎ ಶರವಣ

ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಸರ್ಕಾರದ ಸಚಿವನಾಗಿದ್ದೇನೆ. ನಮ್ಮ ಸರ್ಕಾರದ ಜವಾಬ್ದಾರಿ ಇರುವುದು ಕೊರೊನಾ ನಿಯಂತ್ರಣ ಮಾಡುವುದು. ಕಾನೂನು ಮಾಡುವುದು ದೊಡ್ಡದಲ್ಲ ಜನ ಸಹಕಾರ ಕೊಡಬೇಕು. ಜನ ಸಹಕಾರ ಕೊಟ್ಟರೆ ಕೊರೊನಾ ನಿಯಂತ್ರಣ ಮಾಡಬಹುದು. ಹಾಗಂತ ಗಣೇಶೋತ್ಸವ ಅದ್ದೂರಿಯಾಗಿ ನಡೆಯಬಾರದಾ? ವೈಭವೀಕರಣ ಎಲ್ಲ ಇರಬೇಕು. ಆದರೆ ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಅದನ್ನು ಸಂಘ ಸಂಸ್ಥೆಗಳು ಧಾರ್ಮಿಕ ಮುಖಂಡರು ಮಾಡಬೇಕು. ಕೊರೊನಾ ಏರಿಕೆಯ ಶೇಕಡಾವಾರು ಗಮನದಲ್ಲಿ ಇಟ್ಟುಕೊಂಡು ನಿಯಮ ಸಡಿಲಿಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತದೆ ಅಂತಾ ತಿಳಿಸಿದರು.  ಇದನ್ನೂ ಓದಿ: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ

Comments

Leave a Reply

Your email address will not be published. Required fields are marked *