ಮತಾಂತರ ನಿಷೇಧ ಕಾಯ್ದೆ ಅಗತ್ಯ ಇಲ್ಲ- ಕ್ರಿಶ್ಚಿಯನ್ ಧರ್ಮಗುರುಗಳಿಂದ ಸಿಎಂ ಭೇಟಿ

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಮಾಡಲು ಸರ್ಕಾರ ಚಿಂತನೆ ನಡೆಸಿದ ಬೆನ್ನಲ್ಲೇ ಮತಾಂತರ ನಿಷೇಧ ಕಾಯ್ದೆ ಅಗತ್ಯ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕ್ರಿಶ್ಚಿಯನ್ ಧರ್ಮಗುರು ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೋ ನೇತೃತ್ವದ ಧರ್ಮಗುರುಗಳ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವಿಧಾನಸೌಧದ ಮೂರನೇ ಮಹಡಿಯ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿತು. ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್ 

ಸಿಎಂ ಭೇಟಿ ಸಂದರ್ಭದಲ್ಲಿ ಗೂಳಿಹಟ್ಟಿ ಶೇಖರ್ ಮತಾಂತರ ಆರೋಪಕ್ಕೆ ಧರ್ಮ ಗುರುಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಅಂತವರಲ್ಲ, ನಮ್ಮ ಧರ್ಮದಲ್ಲಿ ಬಲವಂತದ ಮತಾಂತರ ಮಾಡುತ್ತಿಲ್ಲ. ಆ ಆರೋಪ ಸತ್ಯಕ್ಕೆ ದೂರವಾದುದು. ಸಾವಿರಾರು ಮಕ್ಕಳು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದುತ್ತಿದ್ದಾರೆ. ಯಾವ ಮಕ್ಕಳು ಮತಾಂತರ ಆಗಿಲ್ಲ. ಹೀಗಾಗಿ ಇದಕ್ಕಾಗಿ ಪ್ರತ್ಯೇಕ ಮಸೂದೆಯ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮತಾಂತರ ತಡೆಗೆ ಉತ್ತರ ಪ್ರದೇಶದ ರೀತಿ ರಾಜ್ಯದಲ್ಲೂ ಕಾನೂನು ತನ್ನಿ: ಬೋಪಯ್ಯ

ಸಿಎಂ ಭೇಟಿ ಬಳಿಕೆ ಮಾಧ್ಯಮಗಳ ಜೊತೆ ಮಾತನಾಡಿದ ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೋ, ಮತಾಂತರದ ವಿಷಯ ಸುಳ್ಳು. ಪ್ರತಿಯೊಬ್ಬ ಧರ್ಮಧ್ಯಕ್ಷರ ಹೆಸರಲ್ಲಿ ನೂರಾರು ಶಾಲಾ, ಕಾಲೇಜು, ಆಸ್ಪತ್ರೆಗಳಿವೆ. ಒಂದು ಲಕ್ಷಕ್ಕಿಂತ ಹೆಚ್ಚಾಗಿ ಮಕ್ಕಳಿದ್ದಾರೆ. ಒಬ್ಬರಿಗೂ ಮತಾಂತರ ಮಾಡಲು ನಾವು ಹೇಳಿಲ್ಲ. ಅಪ್ಪಿತಪ್ಪಿ ಸಣ್ಣ ಘಟನೆಯಾಗಿದ್ದು ದೊಡ್ಡ ವಿಷಯ ಮಾಡೋದು ಸರಿಯಲ್ಲ ಎಂದು ತಿಳಿಸಿದರು.

ನಮ್ಮ ಅಭಿಪ್ರಾಯ ಆಲಿಸಿದ ಬಳಿಕ ಸಿಎಂ ನೀವ್ಯಾರು ಹಾಗಿಲ್ಲ ಎಂದು ಹೇಳಿದ್ದಾರೆ. ಯಾರೋ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸದನದಲ್ಲಿ ಚರ್ಚೆಯಾಗ್ತಿದೆ ಮಾಡಲಿ. ನಾವೇ ಜನರಿಗೆ ಹೇಳಿದ್ದೇವೆ ಹೀಗೆ ಮಾಡೋದು ಸರಿಯಲ್ಲ. ಯಾರೋ ಬಂದು ಶಿಲುಬೆ, ಪುಸ್ತಕ ಕೊಟ್ಟು ಮತಾಂತರ ಮಾಡುತ್ತಾರೆ ಎಂದರೆ ಸರಿಯಲ್ಲ. ನಮಗೂ ನೈತಿಕ ಅಂತರಂಗವಿದೆ. ಜನರಿಗೆ ಬಲವಂತ ಮಾಡುತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ: ಅರಗ ಜ್ಞಾನೇಂದ್ರ

ಈ ಮಸೂದೆ ಬಗ್ಗೆ ನನಗೆ ಗೊತ್ತಿಲ್ಲ. ಮಸೂದೆ ಅವಶ್ಯಕತೆ ಇಲ್ಲ. ನಾವೆಲ್ಲರೂ ಕ್ರೈಸ್ತ ಧರ್ಮದಿಂದ ರಾಜ್ಯದ ಧರ್ಮಧ್ಯಾಕ್ಷರು ಬಂದಿದ್ದೇವೆ. ಇವತ್ತು ಸಿಎಂಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇವೆ. ಸಿಎಂ ಆಹ್ವಾನ ಕೊಟ್ಟಿದ್ದಕ್ಕೆ ಧನ್ಯವಾದಗಳು. ಸಿಎಂಗೆ ಶಿಕ್ಷಣ, ವೈದ್ಯಕೀಯ ಸಹಕಾರ ಕೊಡುವುದಾಗಿ ಹೇಳಿದ್ದೇವೆ. ಕೊರೊನಾ ಸಮಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇವೆ. ಅನೇಕರಿಗೆ ಆಹಾರ ನೀಡಿ ಸಹಾಯ ಮಾಡಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *