ಉಡುಪಿ: ಬೆಳಗಾವಿಯಲ್ಲಿ ಗೊಂದಲವೇ ಇರಲಿಲ್ಲ, ಕೇವಲ ಪಿಎಲ್‍ಡಿ ಬ್ಯಾಂಕ್ ವಿವಾದ ಮಾತ್ರ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಕೆಡಿಪಿ ಸಭೆಯ ನಂತರ ಮಾಧ್ಯಮಗಳಿಗೆ ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗಾವಿಯಲ್ಲಿ ಯಾವುದೇ ವಿವಾದಗಳಿರಲಿಲ್ಲ, ಪ್ರಕರಣ ಸುಖಾಂತ್ಯವಾಗುವುದಕ್ಕೆ ಸಮಸ್ಯೆ ಇದ್ದದ್ದು ಯಾವಾಗ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಎಲ್ಲವೂ ಸಾಮರಸ್ಯದಿಂದ ನಡೆಯುತ್ತಿದೆ. ನನ್ನ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಚುನಾವಣೆಯಲ್ಲಿ ಜಯವಾಗಿರುವುದು ಯಾವುದೇ ಬಣಕ್ಕೆ ಅಲ್ಲ, ಪಿಎಲ್‍ಡಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜಯವಾಗಿದೆ. ನನ್ನ ಜೊತೆ ಎಲ್ಲರೂ ಸುಮಧುರ ಬಾಂಧವ್ಯದಿಂದ ಇದ್ದಾರೆ ಎಂದು ಹೇಳಿದರು.

ಕೇವಲ ಮಾಧ್ಯಮಗಳಲ್ಲಿ ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾವಣೆಯ ವಿವಾದ ಚರ್ಚೆಯಾಗಿತ್ತು. ಅಲ್ಲದೇ ಮಾಧ್ಯಮಗಳಲ್ಲಿ ಅಸಾಧ್ಯವಾದುದರ ಬಗ್ಗೆ ಚರ್ಚೆಯಾಗುತ್ತಿದೆ. ಕೇವಲ ಅವರ ಖುಷಿಯಂತೆ ಚರ್ಚೆಯಾಗಿದೆ. ನಾನು ಯಾರನ್ನು ತಡೆಯುವುದಿಲ್ಲವೆಂದರು. ಈ ವೇಳೆ ಸಿದ್ದರಾಮಯ್ಯನವರ ಪ್ರವಾಸದ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ವಿದೇಶಕ್ಕೆ ಹೋಗೋದೆ ತಪ್ಪಾ? ಅವರೇನಾರೂ ಒಬ್ಬರೇ ಹೋಗಿದ್ದಾರಾ? ಅವರ ಜೊತೆ ಕೆಲವು ನಾಯಕರೂ ಸಹ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply