ಟವೆಲ್‍ನಲ್ಲಿ ಯಾವುದೇ ಗ್ಲಿಸರಿನ್ ಇಲ್ಲ, ನಮ್ದು ಭಾವನಾತ್ಮಕ ಕುಟುಂಬ: ಹೆಚ್‍ಡಿಕೆ

– ಜಮೀರ್ ಅಹ್ಮದ್ ಕೊಚ್ಚೆ ಇದ್ದಂಗೆ
– ತಾಕತ್ ಇದ್ರೆ ಆಡಿಯೋ ರಿಲೀಸ್ ಮಾಡ್ಲಿ

ವಿಜಯಪುರ: ಟವೆಲ್ ನಲ್ಲಿ ಯಾವುದೇ ರೀತಿಯ ಗ್ಲಿಸರಿನ್ ಇಲ್ಲ. ಬೇಕಿದ್ರೆ ನೀವೇ ಚೆಕ್ ಮಾಡಿ. ನಮ್ಮದು ಮೊದಲಿನಿಂದಲೂ ಭಾವನಾತ್ಮಕ ಕುಟುಂಬ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟವೆಲ್ ನಲ್ಲಿ ಗ್ಲಿಸರಿನ್ ಹಾಕಿದ್ದರಿಂದ ಕಣ್ಣೀರು ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದರು. ನನಗೆ ಸ್ವಾಭಾವಿಕವಾಗಿ ಕಣ್ಣೀರು ಬರುತ್ತದೆ. ಟವೆಲ್ ನಲ್ಲಿ ಯಾವುದೇ ಗ್ಲಿಸರಿನ್ ಇಲ್ಲ, ನೀವೇ ಚೆಕ್ ಮಾಡಿ. ಯಾರದ್ರು ತಮ್ಮ ಸಮಸ್ಯೆ ಹೇಳಿದ್ರೆ ನನಗೆ ಕಣ್ಣಿರು ಬರುತ್ತೆ. ಕಳೆದ 12 ವರ್ಷ ಪಕ್ಷ ಕಟ್ಟಲು ಇರುವ ಶ್ರಮ ಏನಿದೆ ಅದನ್ನ ಯಾರು ಅರ್ಥ ಮಾಡಿಕೊಳ್ಳಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ

ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ, ಜಮೀರ್ ಬ್ಲ್ಯಾಕ್ ಮೇಲ್ ವ್ಯಕ್ತಿ. ಅವರು ಕೊಚ್ಚೆ ಇದ್ದಂತೆ ಎಂದರು. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ

ಇದೇ ವೇಳೆ 20-20 ಸರ್ಕಾರದ ಆಡಿಯೋ ವಿಚಾರದ ಕುರಿತು ಮಾತನಾಡಿ, ತಾಕತ್ ಇದ್ದರೆ ಆಡಿಯೋ ಬಿಡುಗಡೆ ಮಾಡಲಿ. ಬ್ಲ್ಯಾಕ್ ಮೇಲ್ ಜೀವನ ಮಾಡ್ತಾರೆ. ಮಾರ್ಯಾದೆ ಇಲ್ಲದವರ ಜೊತೆಗೆ ಚರ್ಚೆ ಮಾಡಲ್ಲ. ಬೆಂಗಳೂರು ಬಹಳ ದೊಡ್ಡದು. ಬೆಂಗಳೂರಿನಲ್ಲಿ ನನಗೆ ಜಾಗವೇ ಇಲ್ವಾ. ಪಾಪ ಜಮೀರ್ ಅಹ್ಮದ್ ನನಗೆ ಜಾಗ ಕೊಡಬೇಕಾ..? ಕೊಚ್ಚೆಯ ಮೇಲೆ ಕಲ್ಲು ಎಸೆದ್ರೇ ನಮ್ಮ ಮೇಲೆ ಬೀಳುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಸ್ ಓಡಿಸಿಕೊಂಡಿದ್ದವನನ್ನು ಕರ್ಕೊಂಡು ಬಂದು ಶಾಸಕ ಮಾಡಿದೆ -ಜಮೀರ್ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

Comments

Leave a Reply

Your email address will not be published. Required fields are marked *