ಕಾಂಗ್ರೆಸ್, ಜೆಡಿಎಸ್‍ನಲ್ಲಿ ಬಹಳ ಜನ ಸ್ನೇಹಿತರಿದ್ದಾರೆ- ರಾಜಕೀಯ ದಾಳ ಉರುಳಿಸಿದ ಸಿಎಂ

ಉಡುಪಿ: ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ನನಗೆ ಬಹಳ ಸ್ನೇಹಿತರಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯಸಭಾ ಚುನಾವಣೆಗೂ ಮುನ್ನ ರಾಜಕೀಯ ದಾಳವನ್ನು ಉರುಳಿಸಿದ್ದಾರೆ. ಬಿಜೆಪಿ ಮೂರು ಅಭ್ಯರ್ಥಿಗಳನ್ನು ರಾಜ್ಯಸಭಾ ಚುನಾವಣಾ ಕಣಕ್ಕೆ ಇಳಿಸಿದೆ. ನಾಮಪತ್ರ ಸಲ್ಲಿಕೆ ಮಾಡಿ ಸಿಎಂ ಬೊಮ್ಮಾಯಿ ಕರಾವಳಿ ಪ್ರವಾಸವನ್ನು ಕೈಗೊಂಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಉಡುಪಿಗೆ ಬಂದ ಸಿಎಂ ಬೊಮ್ಮಾಯಿ ಮಣಿಪಾಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯಸಭಾ ಚುನಾವಣೆಯ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಮೇಲ್ನೋಟದ ಲೆಕ್ಕಾಚಾರದಲ್ಲೇ ನಾವು ಮೂರನೇ ಸೀಟು ಗೆಲ್ಲುತ್ತೇವೆ. ಮುಂದೆ ಚುನಾವಣೆ ಇದೆ ಏನೇನಾಗುತ್ತೆ ನೋಡೋಣ. ಏನೇನು ಬೆಳವಣಿಗೆಯಾಗುತ್ತದೆ ಕಾದು ನೋಡೋಣ ಅಂತ ಮಾರ್ಮಿಕವಾಗಿ ಮಾತನಾಡಿದ್ದಾರೆ.

ಎರಡನೇ ಪ್ರಾಶಸ್ತ್ಯದ ಮತಗಳನ್ನು ಲೆಕ್ಕ ಹಾಕಿದಾಗ ನಮಗೆ ಸರಳ ಬಹುಮತ ಬರುತ್ತದೆ. ಎಲ್ಲಾ ಕಡೆ ಬಹಳಷ್ಟು ಸ್ನೇಹಿತರಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಸಾಕಷ್ಟು ಹಳೆಯ ಸ್ನೇಹಿತರಿದ್ದಾರೆ. ಈವರೆಗೆ ಯಾರ ಜೊತೆಗೂ ಮಾತುಕತೆ ಮಾಡಿಲ್ಲ. ನಾಮಪತ್ರ ಸಲ್ಲಿಕೆ ಮಾಡಿ ನೇರವಾಗಿ ಉಡುಪಿಗೆ ಬಂದಿದ್ದೇನೆ. ಈವರೆಗೆ ಇನ್ನೂ ಮಾತುಕತೆ ಆಗಿಲ್ಲ ಎಂದರು.

ಸಿಎಂ ಬೊಮ್ಮಾಯಿ ಮಾತಿನ ದಾಟಿ ಮುಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಜೊತೆ ಮಾತುಕತೆ ಮಾಡುತ್ತೇನೆ ಎಂಬಂತಿತ್ತು. ಇದನ್ನೂ ಓದಿ: 21 ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ – ಕರ್ನಾಟಕಕ್ಕೆ 8 ಸಾವಿರ ಕೋಟಿ ಬಿಡುಗಡೆ

Comments

Leave a Reply

Your email address will not be published. Required fields are marked *