ಅಂದು ಕೃಷ್ಣ, ಇಂದು ಶಿವ : ಓ ಮೈ ಗಾಡ್ ಅಂದ ಅಕ್ಷಯ್ ಕುಮಾರ್

ಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್ 2’ (Oh My God 2) ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ. ಸಿನಿಮಾದಲ್ಲಿನ ಅಕ್ಷಯ್ (Akshay Kumar) ಅವತಾರಕ್ಕೆ ಅಭಿಮಾನಿಗಳು ಜೈ ಹೋ ಎಂದಿದ್ದಾರೆ. 2012ರಲ್ಲಿ ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾಗಿತ್ತು. ಇದೀಗ ಪಾರ್ಟ್ 2 ಸಿದ್ಧವಾಗಿದ್ದು ಅಕ್ಷಯ್ ಪಾತ್ರ ಕೂಡ ಬದಲಾಗಿದೆ.

ಹತ್ತು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಓ ಮೈ ಗಾಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಕೃಷ್ಣನಾಗಿ (Krishna) ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಶಿವನ (Shiva) ಅವತಾರವೆತ್ತಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಅದನ್ನು ಅಕ್ಷಯ್ ಅಭಿಮಾನಿಗಳು ಅಪಾರವಾಗಿ ಮೆಚ್ಚಿದ್ದರು. ಇವತ್ತಿನ ಟೀಸರ್ ಅನ್ನು ಅಷ್ಟೇ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ಅಮೆರಿಕಾದಲ್ಲಿ ಅವಳಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ಪ್ರೀತಿ ಜಿಂಟಾ

ಹೇಳಿ ಕೇಳಿ ಇದೊಂದು ಕಾಮಿಡಿ ಸಿನಿಮಾ. ಶಿವನ ರೂಪದಲ್ಲಿ ಬಂದಿರುವ ಅಕ್ಷಯ್, ಯಾವೆಲ್ಲ ಲೀಲೆಗಳನ್ನು ಪರದೆಯ ಮೇಲೆ ಆಡುತ್ತಾರೋ ಕಾದು ನೋಡಬೇಕು. ಟೀಸರ್ ನಲ್ಲಿಯೂ ಹಲವು ಕಾಮಿಡಿ ಅಂಶಗಳು ಇದ್ದು, ಇಡೀ ಸಿನಿಮಾ ಹಾಸ್ಯದ ರಸದೌತಣವನ್ನು ನೀಡುವುದು ಪಕ್ಕಾ ಅನ್ನುವಂತಿದೆ ರಿಲೀಸ್ ಆದ ಟೀಸರ್.

 

ಟೀಸರ್ ನೋಡಿ ಕೆಲವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ ಎಚ್ಚವಹಿಸಿ ಎಂದು ಸಲಹೆ ನೀಡಿದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದರೆ ಬೈಕಾಟ್ ಮಾಡುವುದಾಗಿಯೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಅಕ್ಷಯ್ ಕುಮಾರ್ ಜೊತೆ ಈ ಸಿನಿಮಾದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]