ಬೆಂಗಳೂರು: ಪತಿ ಬಿಟ್ಟು ಹೋದ ನಂತರ ಆತ ಕೆಲಸ ಮಾಡುತ್ತಿದ್ದ ಜಾಗದಲ್ಲಿಯೇ ಪತ್ನಿಯೂ ಕೆಲಸಕ್ಕೆ ಸೇರಿಕೊಂಡಿದ್ದು, ಬಳಿಕ ಅಲ್ಲಿ ಪ್ರೀತಿಯಾಗಿ ಪ್ರಿಯತಮನ ಕೈಯಿಂದ ಕಳ್ಳತನ ಮಾಡಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಸವಿತಾ ಪ್ರಿಯತಮನ ಕೈಯಲ್ಲಿ ಕಳ್ಳತನ ಮಾಡಿಸಿದ್ದಾಳೆ. ಈಕೆ ಪತಿ ಕೈಕೊಟ್ಟ ಎಂದು ಆತ ಕೆಲಸ ಮಾಡುತ್ತಿದ್ದ ಈಜಿಪುರದ ಬಿಸಿನೆಸ್ಮ್ಯಾನ್ ವಿನಯ್ ಅನ್ನೋರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ನಡುವೆ ಯುವಕನ ಜೊತೆ ಪ್ರೀತಿಯಾಗಿದೆ. ಬಳಿಕ ಸವಿತಾ ತಾನು ಕೆಲಸಕ್ಕೆ ಸೇರಿದ ಮೂರನೇ ದಿನಕ್ಕೆ ಪ್ರಿಯತಮನ ಕೈಯಿಂದ ಕಳ್ಳತನ ಮಾಡಿಸಲು ಮುಂದಾಗಿದ್ದಾಳೆ.

ಸವಿತಾ ಒಂದು ದಿನ ಮನೆಯಲ್ಲಿ ಯಾರು ಇಲ್ಲದನ್ನು ನೋಡಿಕೊಂಡು ಮನೆಗೆ ತನ್ನ ಪ್ರಿಯತಮನನ್ನು ಕರೆಸಿಕೊಂಡಿದ್ದಾಳೆ. ಬಳಿಕ ಇಬ್ಬರು ಮನೆಯನ್ನು ದೋಚಿ ಪರಾರಿಯಾಗಿದ್ದಾರೆ. ಮನೆಯನ್ನು ದೋಚಿ ಪರಾರಿಯಾಗೋದು ಹಾಗು ಮನೆ ದೋಚುವಾಗ ತನ್ನ ಪ್ರಿಯತಮೆಯ ಜೊತೆ ಮಾತನಾಡುತ್ತಾ ನಿರ್ದೇಶನ ತೆಗೆದುಕೊಳ್ಳೋದು ಎಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಮನೆ ಮಾಲೀಕ ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply