ಅನಾಥ ಮಕ್ಕಳಿಗಾಗಿ ಶೇಖರಿಸಿಟ್ಟ ಹಣದ ಪೆಟ್ಟಿಗೆ ಕದ್ದು ಪರಾರಿಯಾದ ಯುವಕರು

ಮಡಿಕೇರಿ: ಅನಾಥ ಮಕ್ಕಳಿಗಾಗಿ ಶೇಖರಿಸಿಟ್ಟ ಹಣದ ಪೆಟ್ಟಿಗೆಯನ್ನು ಅಪರಿಚಿತ ಯುವಕರು ಕದ್ದು ಪರಾರಿಯಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರದ ಟೀನೇಜ್ ಚಪ್ಪಲಿ ಅಂಗಡಿಯಲ್ಲಿ ಅನಾಥ ಮಕ್ಕಳ ಅಭಿವೃದ್ಧಿ ಕೇಂದ್ರಕ್ಕೆ ಎಂದು ಬಹುದಿನಗಳಿಂದ ಹಣ ಸಂಗ್ರಹಿಸಲಾಗಿತ್ತು. ಆದರೆ ಗ್ರಾಹಕರಂತೆ ಅಂಗಡಿ ಪ್ರವೇಶ ಮಾಡಿದ ಯುವಕರು ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು ಹಣ ಹೊಂದಿದ್ದ ಪೆಟ್ಟಿಗೆಯೊಂದಿಗೆ ಪರಾರಿಯಾಗಿದ್ದಾರೆ.

ಕದೀಮರ ಕೃತ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ಸೇರಬೇಕಾದ ಹಣವನ್ನು ಕದ್ದವರು ವಿಕೃತ ಮನಸ್ಸಿನವರಾಗಿದ್ದು, ಇದಕ್ಕಿಂತ ಬಿಕ್ಷೆ ಬೇಡಿ ಜೀವನ ಸಾಗಿಸುವುದು ಮೇಲು ಎಂದು ಸಾರ್ವಜನಿಕರು ಹಿಡಿ ಶಾಪಹಾಕಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *