ಮೇಲುಕೋಟೆಯ ಭಾಗದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು

ಮಂಡ್ಯ: ಜಿಲ್ಲೆಯ ಮೇಲುಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ಮೇಲುಕೋಟೆಯ ಬೆಳ್ಳಾಳೆ ಒಂದೇ ಗ್ರಾಮದಲ್ಲಿ ಜಮೀನಿನಲ್ಲಿನ 25ಕ್ಕೂ ಹೆಚ್ಚು ಬೋರ್‌ವೇಲ್‌ನ ಕೇಬಲ್ ಹಾಗೂ ಯಂತ್ರೋಪಕರಣಗಳು ಕಳ್ಳತನವಾಗಿವೆ.

ರಾತ್ರಿ ವೇಳೆ ಕಳ್ಳರು ಜಮೀನಿನಲ್ಲಿ ಇರುವ ಬೋರ್‌ವೇಲ್‌ ಬಳಿಗೆ ಹೋಗಿ ಅಲ್ಲಿರುವ ಕೇಬಲ್ ಹಾಗೂ ಯಂತ್ರೋಪಕರಣಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ಈ ಭಾಗದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೂ ಸಹ ಆತಂಕ ಉಂಟಾಗಿದೆ.

ಒಂದು ರೈತರ ಜಮೀನಿಗೆ ನುಗ್ಗಿ ಅಲ್ಲಿನ ಬೋರ್‌ವೇಲ್‌ನ ಕೇಬಲ್ ಹಾಗೂ ಯಂತ್ರೋಪಕರಣಗಳನ್ನು ಖದೀಮರು ಕಳ್ಳತನ ಮಾಡುತ್ತಿದ್ರೆ, ಇನ್ನೊಂದೆಡೆ ಈ ಭಾಗದಲ್ಲಿ ದೇವಸ್ಥಾನಗಳಲ್ಲಿ ಕಳ್ಳತದ ಪ್ರಕರಣಗಳು ಜರುಗುತ್ತಿವೆ. ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಯ ಹಣ ಹಾಗೂ ದೇವರ ಒಡವೆಗಳಿಗೂ ಸಹ ಕಳ್ಳತನವಾಗುವತ್ತಿವೆ. ಈ ಕಳ್ಳತನ ಪ್ರಕರಣಗಳನ್ನು ತಡೆಯುವಂತೆ ಇದೀಗ ಈ ಭಾಗದ ಜನರು ಮೇಲುಕೋಟೆ ಪೊಲೀಸ್ ಠಾಣೆ ದೂರನ್ನು ನೀಡಿದ್ದಾರೆ.

Comments

Leave a Reply

Your email address will not be published. Required fields are marked *