ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಅಪಾರ ಚಿನ್ನಾಭರಣ ದೋಚಿದ ಕಳ್ಳರು

ಭಾರತೀಯ ಸಿನಿಮಾ ರಂಗದ ಹೆಸರಾಂತ ನಟ ರಜನಿಕಾಂತ್ (Rajinikanth) ಪುತ್ರಿ ನಿರ್ದೇಶಕಿ ಐಶ್ವರ್ಯ ರಜನಿಕಾಂತ್ (Aishwarya) ಮನೆಯಲ್ಲಿ ಕಳ್ಳತನವಾಗಿದೆ. ಈ ಕುರಿತು ಐಶ್ವರ್ಯ ಅವರು ತೆನಾಂಪೇಟೆ (Tenampet) ಪೊಲೀಸರಿಗೆ ದೂರು ನೀಡಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ದುಬಾರಿ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಕಳ್ಳರಿಗಾಗಿ ಪೊಲೀಸ್ ಬಲೆ ಬೀಸಿದ್ದು, ಖದೀಮರಿಗಾಗಿ ಹುಡುಕಾಟ ನಡೆಯುತ್ತಿದೆ.

ಐಶ್ವರ್ಯ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಮಯವನ್ನು ನೋಡಿಕೊಂಡ ಕಳ್ಳರು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಐಶ್ವರ್ಯ ಮನೆಗೆ ನುಗ್ಗಿದ್ದಾರೆ. ಫೆಬ್ರವರಿಯಲ್ಲೇ ಈ ಕಳ್ಳತನ ನಡೆದಿದ್ದು, ಇದೀಗ ಸುದ್ದಿ ಬಹಿರಂಗವಾಗಿದೆ. ಐಶ್ವರ್ಯ ಅವರು ಕೊಟ್ಟಿರುವ ದೂರಿನಲ್ಲಿ ಲಾಕರ್ ನಲ್ಲಿ ಇರಿಸಿದ್ದ ಆಭರಣದ ಬಗ್ಗೆ ಮನೆಯ ಕೆಲವು ಕೆಲಸದವರಿಗೆ ಗೊತ್ತಿತ್ತು ಎಂದು ಬರೆಯಲಾಗಿದೆ. ಇದನ್ನೂ ಓದಿ: ಆಸ್ಕರ್ ಇವೆಂಟ್‌ನಲ್ಲಿ ಭಾಗಿಯಾಗಲು ಭಾರಿ ಮೊತ್ತ ಖರ್ಚು ಮಾಡಿದ ರಾಜಮೌಳಿ ಆ್ಯಂಡ್ ಟೀಂ

ಎಫ್‍ ಐಆರ್ ಪ್ರಕಾರ ’60 ಪವನ್ ಚಿನ್ನ, ಮೂರು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳು, ವ್ರಜದ ಆಭರಣ ಹಾಗೂ ಸಹೋದರಿಯ ಮದುವೆಗೆ ಬಳಸಿದ್ದ ಒಡವೆಗಳನ್ನೂ ಕಳ್ಳರು ದೋಚಿದ್ದಾರೆ. ಫೆಬ್ರವರಿ 10 ರಂದು ಐಶ್ವರ್ಯ ಲಾಕರ್ ತೆರೆದಾಗ ಆಭರಣಗಳು ಮಾಯವಾಗಿದ್ದರ ಬಗ್ಗೆ ಗೊತ್ತಾಗಿದೆ. ಆಘಾತಗೊಂಡ ಅವರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಜ್ರದ ಸೆಟ್, ಪುರಾತನ ಕಾಲದ ಚಿನ್ನಾಭರಣ, ಬಳೆಗಳು, ನವರತ್ನ ಸೆಟ್ ಗಳು ಹೀಗೆ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ಅಷ್ಟೂ ಆಭರಣಗಳು ಕಳುವು ಆಗಿವೆ ಎಂದು ಹೇಳಲಾಗುತ್ತಿದೆ. ದೂರಿನ ಪ್ರತಿಯಲ್ಲಿ ಹಲವು ವರ್ಷಗಳಿಂದ ಲಾಕರ್ ನೋಡಿರಲಿಲ್ಲ. ಈಗ ನೋಡಿದಾಗ ಆಭರಣವಿಲ್ಲ ಎಂದು ಗೊತ್ತಾಗಿದೆ ಎಂದು ಬರೆಯಲಾಗಿದೆ.

Comments

Leave a Reply

Your email address will not be published. Required fields are marked *