ಮಲಗಿದ್ದಲ್ಲೇ ಪ್ರಾಣಬಿಟ್ಟ ‘ದಿ ವೈರ್’ ಖ್ಯಾತಿಯ ನಟ ಲ್ಯಾನ್ಸ್ ರೆಡ್ಡಿಕ್

ಹಾಲಿವುಡ್ ನ ಖ್ಯಾತ ನಟ ಲ್ಯಾನ್ಸ್ ರೆಡ್ಡಿಕ್ (Lance Reddick) ನಿಧನ ಹೊಂದಿದ್ದಾರೆ. 60ರ ವಯಸ್ಸಿನ ಲ್ಯಾನ್ಸ್ ಮಲಗಿದ್ದಲ್ಲಿಯೇ ಪ್ರಾಣಬಿಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಜಾನ್ ವಿಕ್, ದಿ ವೈರ್ (The Wire) ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಅವರು ಇತ್ತೀಚಿನ ದಿನಗಳಲ್ಲಿ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದರು.

ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಲ್ಯಾನ್ಸ್, ಆ ನಂತರ ಹಾಲಿವುಡ್ ಜಗತ್ತಿಗೆ ಕಾಲಿಟ್ಟರು. ತಾವು ಕಪ್ಪಾಗಿದ್ದ ಕಾರಣದಿಂದಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಬಣ್ಣ ನನ್ನ ಬೆಳವಣಿಗೆಗೆ ಹಿನ್ನಡೆ ಮಾಡಬಾರದು ಎಂದು ಅನೇಕ ಸಲ ಹೇಳುತ್ತಿದ್ದರು. ಅಲ್ಲದೇ, ವರ್ಣಬೇಧದ ಬಗ್ಗೆಯೂ ಹಲವಾರು ಬಾರಿ ಮಾತನಾಡಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

ರೆಡ್ಡಿಕ್ ನಿಧನಕ್ಕೆ ಹಾಲಿವುಡ್ ಕಂಬನಿ ಮಿಡಿದಿದೆ. ಅನೇಕ ನಟರು ಸೋಷಿಯಲ್ ಮೀಡಿಯಾಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ನಟನ ಸಿನಿಮಾಗಳ ಮತ್ತು ವೆಬ್ ಸಿರೀಸ್ ಬಗ್ಗೆ ಗುಣಗಾನ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ.

Comments

Leave a Reply

Your email address will not be published. Required fields are marked *