ಗಣೇಶನ ಹಬ್ಬದಂದು ‘ದಿ ವಿಲನ್’ ಚಿತ್ರತಂಡದಿಂದ ಗುಡ್ ನ್ಯೂಸ್!

ಬೆಂಗಳೂರು: ಗಣೇಶ ಹಬ್ಬದಂದು ‘ದಿ ವಿಲನ್’ ಚಿತ್ರತಂಡ ಸಿನಿಮಾದ ರಿಲೀಸ್ ಡೇಟ್ ಅನ್ನು ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಸ್ಯಾಂಡಲ್‍ವುಡ್ ನಿದೇಶಕರಾದ ಜೋಗಿ ಪ್ರೇಮ್ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶನಿಗೆ ಪೂಜೆ ಪುನಸ್ಕಾರ ಬಲು ಜೋರಾಗಿ ನಡೆಯುತ್ತಿದ್ದು, ದಂಪತಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ವಿನಾಯಕನ ಸಮ್ಮುಖದಲ್ಲಿ `ದಿ ವಿಲನ್’ ಸಿನಿಮಾ ರಿಲೀಸ್ ಡೇಟ್ ಚಿತ್ರತಂಡ ಅನೌನ್ಸ್ ಮಾಡಿದೆ.

ಅಕ್ಟೋಬರ್ 18 ರಂದು ರಾಜ್ಯಾದ್ಯಂತ ದಿ ವಿಲನ್ ಬಿಡುಗಡೆಯಾಗುತ್ತಿದ್ದು, ಸುಮಾರು 500 ಚಿತ್ರಮಂದಿರಗಳಲ್ಲಿ ದಿ ವಿಲನ್ ತನ್ನ ಆರ್ಭಟ ಶುರುಮಾಡಲಿದೆ. ಅಷ್ಟೇ ಅಲ್ಲದೇ ಕನ್ನಡ, ತೆಲುಗು, ತಮಿಳು, ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ.

ದಿನೇ ದಿನೇ ಒಂದಿಲ್ಲೊಂದು ಸ್ಪೆಷಲ್ ಸಮಾಚಾರ `ದಿ-ವಿಲನ್’ ತಂಡದಿಂದ ಹೊರಬರುತ್ತಿದೆ. ಇದೀಗ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿತ್ತಿದ್ದ ದಿ ವಿಲನ್ ಆಗಸ್ಟ್ 24 ರಂದು ಬಿಡುಗಡೆ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದರು. ಆದರೆ ಸೆನ್ಸಾರ್ ಕಾರಣದಿಂದಾಗಿ ಬರುವ ವಾರವೇ ಚಿತ್ರ ಬಿಡುಗಡೆ ದಿನವನ್ನು ಘೋಷಿಸುವುದಾಗಿ ಹೇಳಿದ್ದರು. ಹೀಗಾಗಿ ಗಣೇಶ ಹಬ್ಬದಂದೇ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಅನ್ನು ತಿಳಿಸಿದೆ.

ಕರಿಯ, ಎಕ್ಸ್‍ಕ್ಯೂಸ್ ಮಿ, ಜೋಗಿ ಸಿಸಿಮಾಗಳಂತಹ ಸೂಪರ್ ಡೂಪರ್ ಹಿಟ್ ಕೊಟ್ಟಂತ ನಿರ್ದೇಶಕ ಪ್ರೇಮ್, ಶಿವಣ್ಣ ಹಾಗೂ ಕಿಚ್ಚ ಸುದೀಪ್‍ರನ್ನು ಹಾಕಿಕೊಂಡು ದಿ ವಿಲನ್ ಸಿನಿಮಾವನ್ನು ಮಾಡಿದ್ದು, ಜನರಲ್ಲಿ ಕೂತುಹಲದ ಮಳೆಯನ್ನೇ ಸುರಿಸುತ್ತಿದೆ.

ದಿ ವಿಲನ್ ಸಿನಿಮಾಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ್ದು, ಸಿ.ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಸುದೀಪ್, ಶಿವಣ್ಣ, ಆಮಿ ಜಾಕ್ಸನ್ ಜೊತೆಯಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *