ಇಂದಿನಿಂದ T20 ವಿಶ್ವಕಪ್ ಸೂಪರ್-12 ಪಂದ್ಯಾಟ ಆರಂಭ – ಬಲಿಷ್ಠ ತಂಡಗಳ ಕಾದಾಟ

ದುಬೈ: ಟಿ20 ವಿಶ್ವಕಪ್ ಕ್ರಿಕೆಟ್ ಹಬ್ಬ ಇಂದಿನಿಂದ ಸೂಪರ್-12 ಪಂದ್ಯಾಟಗಳು ಆರಂಭವಾಗುತ್ತಿದ್ದು, ವಿಶ್ವದ ಬಲಿಷ್ಠ ತಂಡಗಳ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ.

ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿರುವ ತಂಡಕ್ಕೆ ಮತ್ತೊಮ್ಮೆ ಕಪ್ ಗೆಲ್ಲುವ ತವಕವಾದರೆ. ಈವರೆಗಿನ ವಿಶ್ವಕಪ್‍ನಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ತಂಡಗಳು ಚೊಚ್ಚಲ ಬಾರಿ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಹುರುಪಿನೊಂದಿಗೆ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಮೇಲ್ನೋಟಕ್ಕೆ ಎಲ್ಲ ತಂಡಗಳು ಕೂಡ ಬಲಾಢ್ಯ ತಂಡಗಳಾಗಿ ಗುರುತಿಸಿಕೊಂಡಿದೆ. ಇದನ್ನೂ ಓದಿ: ಯಾವೆಲ್ಲ ತಂಡಗಳು ಈವರೆಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿವೆ?

ಇಂದು ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಈವರೆಗೆ ವಿಶ್ವಕಪ್ ಗೆಲ್ಲದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದೆ. ಎರಡು ತಂಡಗಳಲ್ಲೂ ಕೂಡ ಟಿ20 ಕ್ರಿಕೆಟ್‍ನಲ್ಲಿ ಪ್ರಸಿದ್ಧಿಗಳಿಸಿದ ಆಟಗಾರರ ದಂಡೇ ಇದೆ. ಮೊದಲ ಪಂದ್ಯದಲ್ಲೇ ಅಬ್ಬರಿಸಿ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಎರಡು ತಂಡಗಳು ಕಾದಾಡಲಿದ್ದು, ಪಂದ್ಯ ಅಬುದಾಬಿಯಲ್ಲಿ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಭಾರತ vs ಪಾಕಿಸ್ತಾನ ನಡುವೆ ಯಾರು ಬೆಸ್ಟ್?

ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿದ್ದು, ಟಿ20 ವಿಶ್ವಕಪ್ ಎರಡು ಬಾರಿ ಗೆದ್ದು, ಚುಟುಕು ಕ್ರಿಕೆಟ್‍ನ ಹಿಟ್ಟರ್‍ ಗಳ ತಂಡವಾಗಿ ಗುರುತಿಸಿಕೊಂಡಿರುವ ವೆಸ್ಟ್ ಇಂಡೀಸ್ ಬಲಿಷ್ಠ ಆಂಗ್ಲರ ಸವಾಲನ್ನು ಎದುರಿಸಲಿದ್ದಾರೆ. ಪಂದ್ಯ ದುಬೈನಲ್ಲಿ ಸಂಜೆ 7:30ಕ್ಕೆ ಆರಂಭವಾಗಲಿದೆ. ಇದನ್ನೂ ಓದಿ: ಭಾರತ Vs ಪಾಕಿಸ್ತಾನ ಮ್ಯಾಚ್ – 10 ಸೆಕೆಂಡ್ ಜಾಹೀರಾತಿಗೆ ಲಕ್ಷ ಲಕ್ಷ ರೇಟ್

Comments

Leave a Reply

Your email address will not be published. Required fields are marked *