ಹಣ್ಣು ಮಾರಿ ಮನೆ ನಡೆಸಿದ 60ರ ಅಜ್ಜಿ ಮೂರೇ ವರ್ಷದಲ್ಲಿ ಹೈರಾಣಾದ ಕಥೆ

ಬಾಗಲಕೋಟೆ: ಮಹಾಮಾರಿ ಕೊರೊನಾದಿಂದ ಎಷ್ಟೋ ಜೀವಗಳು ಬಲಿಯಾದವು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎರಡು ಬಾರಿ ಲಾಕ್‍ಡೌನ್ ಮಾಡಬೇಕಾಯಿತು. ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಮತ್ತೆ ವೀಕೆಂಡ್ ಕಫ್ರ್ಯೂ ಜಾರಿಯಾಗಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆ ಇಂದು ಸ್ತಬ್ಧವಾಗಿತ್ತು. ಆದ್ರೆ ಬಾಗಲಕೋಟೆ ಓರ್ವ ಅಜ್ಜಿಯ ಕಥೆಯನ್ನ ಕೇಳಿದ್ರೆ ನೀವೂ ಅಚ್ಚರಿಯಾಗ್ತೀರಿ.

ಹೌದು, ಬಾಗಲಕೋಟೆ ನಗರದ ವಾಸಿಯಾಗಿರುವ ಅಜ್ಜಿ ರಾಜೀಯಾ ಅವರಿಗೆ 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಈ ಅಜ್ಜಿ ಕಳೆದ 50 ವರ್ಷಗಳಿಂದ ಹಣ್ಣುಗಳನ್ನ ಮಾರಾಟ ಮಾಡಿ ಸ್ವಾಭಿಮಾನದಿಂದ ಜೀವನ ಸಾಗಿಸಿದ್ದಾರೆ. ಆದ್ರೆ ಕಳೆದ ಮೂರು ವರ್ಷಗಳಲ್ಲಿ ಕೊರೊನಾದಿಂದ ಅಜ್ಜಿ ಹೈರಾಣಾಗಿ ಹೋಗಿದ್ದಾರೆ. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ತೆರಳಲು ಬಸ್ ಸಮಸ್ಯೆ – ನಿಲ್ದಾಣದಲ್ಲೇ ಕಣ್ಣೀರಿಟ್ಟ ಮಹಿಳೆ

ಅಂದಹಾಗೆ ರಾಜೀಯಾ ಅವರಿಗೆ 4 ಜನ ಮಕ್ಕಳಿದ್ದಾರೆ. ಆ ನಾಲ್ಕು ಜನ ಮಕ್ಕಳ ಮದುವೆಯಾಗಿದ್ದು, 8 ಮೊಮ್ಮಕ್ಕಳಿದ್ದಾರೆ. ವಿಶೇಷವೆಂದ್ರೆ ಇವರೆಲ್ಲರನ್ನ ಅಜ್ಜಿ ಹಣ್ಣು ಮಾರಾಟ ಮಾಡಿಯೇ ಸಾಕಿ ಮನೆಯನ್ನು ನಡೆಸಿದ್ದರು. ಅಜ್ಜಿಗೆ ಕೇವಲ ಒಂದು ಸಣ್ಣ ಮನೆ ಬಿಟ್ಟರೆ ಯಾವುದೇ ಆಸ್ತಿ ಇಲ್ಲ. ಹೀಗಾಗಿ ತುತ್ತಿನ ಚೀಲ ತುಂಬಿಸಲು ಅಜ್ಜಿ ಹಣ್ಣು ಮಾರಾಟಕ್ಕೆ ಇಳಿದಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಾನು ಹಣ್ಣುಗಳನ್ನ ಮಾರಾಟ ಮಾಡಿ ನೆಮ್ಮದಿಯ ಜೀವನ ಸಾಗಿಸ್ತಿದೆ. ಕಳೆದ 50 ವರ್ಷಗಳ ಅವಧಿಯಲ್ಲಿ ಅನುಭವಿಸಿದ ನೋವನ್ನ ನಾನು ಈ ಎರಡು ವರ್ಷದಲ್ಲಿ ಅನುಭವಿಸಿದ್ದೇನೆ ಎಂದು ನೋವಿನಿಂದ ಹೇಳಿದ್ದಾರೆ. ಇದಕ್ಕೆ ದೊಡ್ಡ ಕಾರಣವೇ ಮಹಾಮಾರಿ ಕೊರೊನಾ ಎಂದು ಶಪಿಸಿದ್ದಾರೆ.

ಕೊರೊನಾ ಬಂದಾಗಿನಿಂದ ಇಲ್ಲಿಯವರೆಗೆ ಅಜ್ಜಿಯ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಕಡಿಮೆಯಾಗಿ ಹೋಗಿದೆ. ದಿನವೊಂದಕ್ಕೆ ಅಜ್ಜಿ ಅಬ್ಬಾಬ್ಬಾ ಅಂದ್ರೆ ನಾನ್ನೂರೋ, ಐನೂರೋ ಸಂಪಾದಿಸೋದು ಕಷ್ಟವಾಗಿ ಹೋಗಿದೆ. ಸೇಬು, ಮೂಸಂಬಿ, ದ್ರಾಕ್ಷಿ, ಬಾಳೆಹಣ್ಣು ಇಟ್ಟು ಮಾರಾಟ ಮಾಡುವ ಅಜ್ಜಿ, ಕಳೆದ ಎರಡು ವರ್ಷಗಳಲ್ಲಿ ಭಾರೀ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಇದ್ದ ಮಕ್ಕಳು ಬೇರೆ ಬೇರೆ ಕಡೆ ದುಡಿಯಲು ಹೋಗಿದ್ದಾರೆ. ಇದನ್ನೂ ಓದಿ:  ಪ್ರೋಮೋ ಶೇರ್ ಮಾಡಿ ಸಚಿನ್ ತಂಡವನ್ನು ಕ್ಷಮೆಯಾಚಿಸಿದ ಬಿಗ್ ಬಿ

ಒಬ್ಬಂಟಿ ಅಜ್ಜಿ, ಹಣ್ಣುಗಳನ್ನ ಮಾರಿಯೇ ಜೀವನ ಸಾಗಿಸಬೇಕಿದೆ. ಇಂದು ವೀಕೆಂಡ್ ಕಫ್ರ್ಯೂ ಇದ್ದ ಕಾರಣ ಅಜ್ಜಿ ಒಂದೇ, ಒಂದು ರೂಪಾಯಿಯನ್ನು ವ್ಯಾಪಾರ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹಣ್ಣುಗಳನ್ನ ಮಾರಿಯೇ ಜೀವನ ಸಾಗಿಸಿದ ದಿನಗಳನ್ನ ಅವರು ನೆನಪಿಸಿಕೊಂಡರು.

Comments

Leave a Reply

Your email address will not be published. Required fields are marked *