ಸಾಧಿಸುವ ಛಲವಿದ್ದರೆ ಯಾವುದೂ ಕಷ್ಟವಲ್ಲ ಅನ್ನೋದಕ್ಕೆ ಮೂವರು ವಿದ್ಯಾರ್ಥಿನಿಯರೇ ಸಾಕ್ಷಿ!

ಬೆಂಗಳೂರು; ಬದುಕು ಕೆಲವರ ಪಾಲಿಗೆ ಅದೆಂಥ ಅಗ್ನಿಪರೀಕ್ಷೆ, ಸಂಕಷ್ಟದ ದಿನಗಳನ್ನು ತಂದಿಡುತ್ತೆ ಅಂದರೆ ಈ ಸವಾಲನ್ನು ಗೆಲ್ಲಲು ಸಾಧ್ಯವೇ ಇಲ್ಲ ಅನಿಸಿ ಬಿಡುತ್ತೆ. ಆದರೆ ಈ ಕಷ್ಟದ ದಿನಗಳನ್ನೇ ಮೆಟ್ಟಿಲಾಗಿಸಿ ಸಾಧನೆಗೈದ ಅದ್ಭುತ ಮೂರು ಮಕ್ಕಳ ಕಥೆ ಇಲ್ಲಿದೆ.

ಹೌದು.. ಸಾಧಿಸುವ ಮನಸೊಂದು ಇದ್ದರೆ ಬದುಕಿನ ಮುಂದೆ ಬರುವ ಸವಾಲು ಕಷ್ಟ ಬಡತನ ಇದ್ಯಾವುದು ಲೆಕ್ಕಕ್ಕೆ ಬರಲ್ಲ. ಇದಕ್ಕೆ ನೈಜ ಉದಾಹರಣೆ ಮೂವರು ವಿದ್ಯಾರ್ಥಿನಿಯರು. ಈ ಮಕ್ಕಳು ಎಸ್‍ಎಸ್‍ಎಲ್‍ಸಿಯಲ್ಲಿ ಟಾಪರ್ಸ್ ಆಗಿದ್ದು, ಇವರ ಬದುಕು ಎಲ್ಲರಂತಲ್ಲ.

ಭಿಕ್ಷೆ, ಗಾರೆ ಕೆಲ್ಸ ಮಾಡ್ತಿದ್ದಾಕೆ ಟಾಪರ್: ತಂದೆಯ ಜೊತೆಗೆ 8 ವರ್ಷದ ಹಿಂದೆ ಭಿಕ್ಷೆ ಬೇಡುತ್ತಿದ್ದ ಆಗಾಗ ಗಾರೆ ಕೆಲಸ ಮಾಡುತ್ತಿದ್ದ ಸೋನು ಅಕಸ್ಮಾತ್ ಆಗಿ ಬೆಂಗಳೂರಿನ ಸ್ಪರ್ಶ ಟ್ರಸ್ಟ್ ಕಣ್ಣಿಗೆ ಬೀಳ್ತಾಳೆ. ಅವರ ಸಹಾಯದೊಂದಿಗೆ ಹೆಸರುಘಟ್ಟದ ವಿವೇಕಾನಂದ ಶಾಲೆಗೆ ಸೇರಿ ಚೆನ್ನಾಗಿ ಓದಿ ಈ ಬಾರಿ ಎಸ್‍ಎಸ್‍ಎಲ್‍ಸಿ ಎಗ್ಸಾಂ ನಲ್ಲಿ 602ಗೆ ಅಂಕ ಗಳಿಸಿ ಟಾಪರ್ ಆಗಿದ್ದಾಳೆ.

ಸ್ವಿಮ್ಮಿಂಗ್ ಪೂಲ್ ಗಾರ್ಡ್, ಟೈಲರ್ ಮಗಳು ಬಿಬಿಎಂಪಿ ಶಾಲೆಗೆ ಟಾಪರ್: ಶ್ರೀರಾಮಪುರದ ಬಿಬಿಎಂಪಿ ಶಾಲೆಯ ಉಜ್ವಲ ಸೆಕ್ಯೂರಿಟಿ ಗಾರ್ಡ್, ಟೈಲರ್ ಮಗಳು. ಬಡತನದ ಮಧ್ಯೆಯೂ ಸರಸ್ವತಿ ದೇವತೆ ಉಜ್ವಲ ಕೈಹಿಡಿದ್ದಾಳೆ. ಟ್ಯೂಷನ್‍ಗೆ ಹೋಗದೇ 616 ಅಂಕ ಪಡೆದು ಬಿಬಿಎಂಪಿ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದಾಳೆ. ಇದನ್ನೂ ಓದಿ: ಜಸ್ಟ್ ಪಾಸ್ ಆದ ಖುಷಿಯಲ್ಲಿ ಮಳೆಯಲ್ಲೇ ಡ್ಯಾನ್ಸ್ ಮಾಡಿದ ವಿದ್ಯಾರ್ಥಿ

ಅಮ್ಮನ ಕೊಂದ ಅಪ್ಪ- ಜೈಲು ಪಾಲಾದ ಅಪ್ಪ: ಪೂಜಾ ಬದುಕಿನಲ್ಲಂತೂ ಅಬ್ಬಾ ಎನಿಸುವ ಘಟನೆ ನಡೆದೇ ಹೋಗಿತ್ತು. ತಾಯಿಯನ್ನು ಕುಡಿದ ಮತ್ತಿನಲ್ಲಿ ಎರಡು ವರ್ಷದ ಹಿಂದೆ ತಂದೆ ಕೊಂದಿದ್ರು. ಜೈಲುಪಾಲಾದ್ರು. ತಂದೆಯ ಬಗ್ಗೆ ಆರಂಭದಲ್ಲಿ ದ್ವೇಷದ ಭಾವನೆ ಇಟ್ಟುಕೊಂಡಿದ್ದ ಪೂಜಾ ಅದಾದ ಬಳಿಕ ತಂದೆ ಕ್ಷಮೆಯಾಚನೆ ಬಳಿಕ ಹೆತ್ತವರ ಕನಸು ನನಸು ಮಾಡಲು ಚೆನ್ನಾಗಿ ಓದಿದ್ದಾಳೆ. ಇವಳ ವಿದ್ಯಾಭ್ಯಾಸ ಹೊಣೆ ಹೊತ್ತಿಕೊಂಡಿದ್ದು ಕೂಡ ಸ್ಪರ್ಶ್ ಟ್ರಸ್ಟ್. ಹೆಸರುಘಟ್ಟದ ವಿವೇಕಾನಂದ ಶಾಲೆಯಲ್ಲಿ ಶೇಕಡಾ 94ರಷ್ಟು ಅಂಕ ಪಡೆದು ಟಾಪರ್ ಆಗಿದ್ದಾಳೆ ಪೂಜಾ.

ಇಡೀ ಬದುಕಿಗೆ ಈ ಮೂವರು ವಿದ್ಯಾರ್ಥಿನಿಯರು ಸ್ಫೂರ್ತಿ. ಬದುಕನ್ನು ಸಾಧನೆಯ ಮೂಲಕ ಗೆಲ್ಲಲು ಹೊರಟ ಈ ಬೆಂಕಿಯಲ್ಲಿ ಅರಳಿದ ಹೂವುಗಳ ಬದುಕಿಗೆ ನಿಮ್ಮದು ಹಾರೈಕೆ ಇರಲಿ. ಎಂಥಹ ಸಂದರ್ಭದಲ್ಲೂ ಹೆಣ್ಮಕ್ಕಳೇ ಸ್ಟ್ರಾಂಗ್ ಗುರೂ ಅನ್ನೋದನ್ನು ಈ ಮೂವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.. ಈ ಮೂವರಿಗೂ ಆಲ್ ದಿ ಬೆಸ್ಟ್. ಇದನ್ನೂ ಓದಿ: SSLC ಫಲಿತಾಂಶ: ಚಿತ್ರದುರ್ಗದ ಆರು ವಿದ್ಯಾರ್ಥಿಗಳು ಮೇಲುಗೈ

Comments

Leave a Reply

Your email address will not be published. Required fields are marked *