ಅಮೆರಿಕದಲ್ಲಿ ಗುಂಡಿನ ದಾಳಿ ನಡೆಸಿದ್ದ ಶೂಟರ್ 2 ದಿನಗಳ ಬಳಿಕ ಶವವಾಗಿ ಪತ್ತೆ

ವಾಷಿಂಗ್ಟನ್: ಬುಧವಾರ ರಾತ್ರಿ ಅಮೆರಿಕದ (America) ಮೈನೆಯಲ್ಲಿ (Maine) ಗುಂಡಿನ ದಾಳಿ ನಡೆಸಿ 18 ಜನರನ್ನು ಹತ್ಯೆಗೈದಿದ್ದ ಶೂಟರ್ (Shooter) 2 ದಿನಗಳ ಬಳಿಕ ಸ್ವಯಂ ಪ್ರೇರಿತನಾಗಿ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.

ರಾಬರ್ಟ್ ಕಾರ್ಡ್ (Robert Card) (40) ಮೃತ ಶೂಟರ್. ಕಳೆದ 2 ದಿನಗಳಿಂದ ಪೊಲೀಸರು ಆರೋಪಿ ರಾಬರ್ಟ್ ಪತ್ತೆಗಾಗಿ ತನಿಖೆ ನಡೆಸುತ್ತಿದ್ದರು. ಆದರೆ ಆತನ ಮೃತದೇಹ ಲೆವಿಸ್ಟನ್ ನಗರದಿಂದ 8 ಕಿಲೋ ಮೀಟರ್ ದೂರದ ಕಾಡಿನಲ್ಲಿ ಪತ್ತೆಯಾಗಿದೆ ಎಂದು ಮೈನೆ ಸಾರ್ವಜನಿಕ ಸುರಕ್ಷತಾ ಆಯುಕ್ತ ಮೈಕ್ ಸೌಶುಕ್ ಹೇಳಿದ್ದಾರೆ. ಇದನ್ನೂ ಓದಿ:  ಅಮೆರಿಕದ ಮೈನೆಯಲ್ಲಿ ಗುಂಡಿನ ದಾಳಿ – 22 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ಈಶಾನ್ಯ ರಾಜ್ಯವಾದ ಮೈನೆಯಲ್ಲಿರುವ ಈ ಹಾರ್ಡ್-ಸ್ಕ್ರಬಲ್ ನಗರದಲ್ಲಿನ ಬೌಲಿಂಗ್ ಅಲ್ಲೆ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಬುಧವಾರ ಸಂಜೆ ರಾಬರ್ಟ್ ಕಾರ್ಡ್ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, 18 ಜನರು ಸಾವನ್ನಪ್ಪಿ 13 ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

 ಈ ಘಟನೆಯ ಬಳಿಕ ಸ್ಥಳೀಯರು ಆತಂಕಗೊಂಡಿದ್ದು, ಮನೆಯಿಂದ ಹೊರಬರದಂತೆ ಪೊಲೀಸರು ಸೂಚನೆ ನೀಡಿದ್ದರು. ರಾಬರ್ಟ್ ಸೇನಾ ಮೀಸಲು ಪಡೆಯಲ್ಲಿ ಬಂದೂಕು ತರಬೇತುದಾರನಾಗಿದ್ದು, ಮೈನೆ ರಾಜ್ಯದ ಸಾಕೊದಲ್ಲಿ ತರಬೇತಿ ನೀಡಲು ನಿಯೋಜಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕತಾರ್‌ನಲ್ಲಿ ಬಂಧಿತರಾಗಿದ್ದ 8 ಮಾಜಿ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ! – ಭಾರತಕ್ಕೆ ಆಘಾತ

 ಅಲ್ಲದೇ ರಾಬರ್ಟ್ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 2023ರಲ್ಲಿ ಎರಡು ವಾರಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಕಾನೂನು ಉಲ್ಲಂಘನೆ – ಇರಾನ್‌ನಲ್ಲಿ 12 ನಟಿಯರಿಗೆ ನಿಷೇಧ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]