ಅಭಿಮಾನಿಗಳಿಗೆ ಗುಡ್‌ ನ್ಯೂಸ್- ಬರಲಿದೆ ‘ಶೈತಾನ್’ ಚಿತ್ರದ ಸೀಕ್ವೆಲ್

ಬಾಲಿವುಡ್‌ ನಟ ಅಜಯ್‌ ದೇವಗನ್‌ (Ajay Devgn) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ವರ್ಷ ಗೆದ್ದು ಬೀಗಿದ್ದ ಶೈತಾನ್‌ ಮತ್ತೆ ಹೊಸ ಕಥೆಯೊಂದಿಗೆ ಬರುತ್ತಿದೆ.  ‘ಶೈತಾನ್ ಪಾರ್ಟ್ 2’ಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಇದರ ಸೀಕ್ವೆಲ್‌ ಖಾತ್ರಿಯಾಗಿದೆ. ಇದನ್ನೂ ಓದಿ:ನಾನು ಭೂಮಿಯ ಮೇಲಿನ ಅದೃಷ್ಟ ವ್ಯಕ್ತಿ: ವಿಕ್ರಮ್ ಭೇಟಿಯಾದ ಡಿವೈನ್ ಸ್ಟಾರ್

ಈ ವರ್ಷ ತೆರೆಕಂಡ ‘ಶೈತಾನ್’ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು. ಬ್ಲ್ಯಾಕ್ ಮ್ಯಾಜಿಕ್‌ನ ಕಥೆ ಈ ಚಿತ್ರದಲ್ಲಿ ಇತ್ತು. ಅಜಯ್ ದೇವಗನ್ ಈ ಚಿತ್ರಕ್ಕೆ ಹೀರೋ ಆಗಿದ್ದರು. ಸೌತ್ ನಟಿ ಜ್ಯೋತಿಕಾ (Jyothika) ಅವರು ಅಜಯ್ ದೇವಗನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆರ್. ಮಾಧವನ್ (R. Madhavan) ಅವರು ನೆಗೆಟಿವ್ ಶೇಡ್‌ನ ಪಾತ್ರಕ್ಕೆ ಜೀವ ತುಂಬಿದ್ದರು.

ಇದೀಗ ಶೈತಾನ್ ಸೀಕ್ವೆಲ್‌ಗೆ ಕಥೆ ಸಿದ್ಧವಾಗಿದೆ. ಅಜಯ್ ದೇವಗನ್ ಜೊತೆ ತಂಡ ಮಾತುಕತೆ ನಡೆಸಿ ಪಾರ್ಟ್ 2 ಭಾಗದ ಕಥೆ ಒಪ್ಪಿಸಿದ್ದಾರೆ. ಅವರು ಕೂಡ ಚಿತ್ರಕ್ಕೆ ಓಕೆ ಎಂದಿದ್ದಾರೆ. ಆದರೆ ಈಗಾಗಲೇ ಅಜಯ್ ದೇವಗನ್ ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್ ಇರುವ ಕಾರಣ, ಅದನ್ನು ಮುಗಿಸಿದ ಬಳಿಕ ‘ಶೈತಾನ್ 2’ ಕಥೆ ಕೈಗೆತ್ತಿಕೊಳ್ಳಲಿದ್ದಾರೆ.

ಸದ್ಯ ಈ ವಿಚಾರ ತಿಳಿದು ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ‘ಶೈತಾನ್’ 2ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.