ನಂದಿಬೆಟ್ಟ ವೀಕ್ಷಿಸಲು ಬಂದಿದ್ದ ಪ್ರವಾಸಿಗರಿಗೆ RTO ಅಧಿಕಾರಿಗಳಿಂದ ಶಾಕ್

ಚಿಕ್ಕಬಳ್ಳಾಪುರ: ವೀಕೆಂಡ್‍ನಲ್ಲಿ ಬೆಂಗಳೂರಿನ ಹಾಟ್ ಫೆವರೇಟ್ ಪಿಕ್ನಿಕ್ ಸ್ಪಾಟ್ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಬೈಕ್ ಏರಿ ಬಂದ ಪ್ರವಾಸಿಗರಿಗೆ ಬೆಳ್ಳಂಬೆಳಗ್ಗೆ ಆರ್‌ಟಿಓ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ರಾಣಿ ಕ್ರಾಸ್ ಬಳಿ ಆರ್‌ಟಿಓ ಜಂಟಿ ಆಯುಕ್ತ ಕೆ.ಟಿ ಹಾಲಸ್ವಾಮಿ ನೇತೃತ್ವದಲ್ಲಿ 5 ತಂಡಗಳಲ್ಲಿ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 120ಕ್ಕೂ ಹೆಚ್ಚು ಬೈಕ್ ಸವಾರರಿಗೆ ದಂಡ ವಿಧಿಸಿದ್ದಾರೆ. ಅಂದಹಾಗೆ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ರಾಜಾರೋಷವಾಗಿ ಕರ್ಕಶ ಶಬ್ಧ ಮಾಡುತ್ತಾ ಬೈಕ್‍ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಬೈಕ್ ಸವಾರರಿಗೆ ಕ್ಲಾಸ್ ತೆಗೆದುಕೊಂಡು ದಂಡ ವಿಧಿಸಿದ್ದಾರೆ. ಇದನ್ನೂ ಓದಿ:  48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

ನಂದಿಬೆಟ್ಟಕ್ಕೆ ಹೋಗಬೇಕು ಬೆಳಗಿನ ಜಾವ ಸೂರ್ಯೋದಯ ನೋಡಬೇಕು ಅಂತ ಆಸೆಯಿಂದ ಬಂದಿದ್ದ ಪ್ರವಾಸಿಗರಿಗೆ ಆರ್‌ಟಿಓ ಅಧಿಕಾರಿಗಳು ಶಾಕ್ ನೀಡಿದ್ದಾರೆವೀಕೆಂಡ್‍ನಲ್ಲಿ ಮನಸ್ಸೋ ಇಚ್ಚೆ ವೀಲ್ಹಿಂಗ್, ಕರ್ಕಶ ಶಬ್ದ ಮಾಡುತ್ತಾ ಪ್ರವಾಸಿಗರು ಕಿರಿಕಿರಿ ಮಾಡುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಗಳ ಜನ ಆರ್‌ಟಿಓ ಈ ಇಲಾಖಾಧಿಕಾರಿಗಳ ಗಮನಕ್ಕೆ ತಂದಿದ್ದು, ಹೀಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ:  ಪ್ರಭಾಸ್, ಅನುಷ್ಕಾ ಶೆಟ್ಟಿ ಕೊಟ್ರು ಗುಡ್‌ನ್ಯೂಸ್: ಮತ್ತೆ ಒಂದಾದ ‘ಬಾಹುಬಲಿ’ ಜೋಡಿ

Live Tv

Comments

Leave a Reply

Your email address will not be published. Required fields are marked *