ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಫಸ್ಟ್ ಟೀಸರ್ ಲಾಂಚ್ ಆಗಿದೆ.
1962ರಲ್ಲಿ ಭಾರತ-ಚೀನಾ ನಡುವೆ ನಡೆದ ಯುದ್ಧದ ಸಂದರ್ಭದ ಕಥೆ ಇದಾಗಿದ್ದು ನಿರ್ದೇಶಕ ಕಬೀರ್ ಖಾನ್ ಕಲ್ಪನೆಯಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಒಬ್ಬ ಪೆದ್ದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ 30ಲಕ್ಷಕ್ಕೂ ಹೆಚ್ಚಿ ಬಾರಿ ವೀಕ್ಷಣೆಯಾಗಿದೆ.
ಸಲ್ಮಾನ್ ಖಾನ್ ಕೂಡ ಟೀಸರನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ನಿರ್ದೇಶಕ ಕರಣ್ ಜೋಹರ್, ನಟಿಯರಾದ ಅಥಿಯಾ ಶೆಟ್ಟಿ, ದಿಯಾ ಮಿರ್ಜ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಹಾಗೂ ಸಿನಿರಸಿಕರು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೂನ್ 23ಕ್ಕೆ `ಟ್ಯೂಬ್‍ಲೈಟ್’ ಚಿತ್ರ ವಿಶ್ವಾದ್ಯಂತ ಬೆಳ್ಳಿಪರದೆ ಮೇಲೆ ಬೆಳಗಲಿದೆ.
Jaljaa Jaljaa … Jal Gaya #TubelightTeaser! @kabirkhankk @amarbutala @TubelightKiEid @SKFilmsOfficial https://t.co/aEZweExwMl
— Salman Khan (@BeingSalmanKhan) May 4, 2017





Leave a Reply