ಕೆಲವು ಮುಸ್ಲಿಮರ ಮನಸ್ಥಿತಿ ಬದಲಾವಣೆ ಆಗಬೇಕಿದೆ: ಈಶ್ವರಪ್ಪ

KS ESHWARAPPA

ಶಿವಮೊಗ್ಗ: ರಾಜ್ಯದಲ್ಲಿ ಹಿಜಬ್ ಸಮಸ್ಯೆ ಹುಟ್ಟಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಕೆಲವು ಮುಸ್ಲಿಮರ ಮನಸ್ಥಿತಿ ಬದಲಾವಣೆಯಾಗಬೇಕಿದೆ. ಮುಸಲ್ಮಾನರಲ್ಲಿ ಇರುವ ಹಿರಿಯರೇ ಇಂತಹವರಿಗೆ ಬುದ್ಧಿ ಹೇಳುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೆಲವು ಮುಸ್ಲಿಮರು ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳಲು ಆಗುತ್ತದೋ, ಇಲ್ಲವೋ ಎಂಬ ಮನಸ್ಥಿತಿ ಹೊಂದಿದ್ದಾರೆ. ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳಬಾರದು ಅಂತಾ ಕೆಲವರು ನಿಶ್ಚಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬದುಕಿರುವಾಗಲೆ ರೈತನಿಗೆ ಮರಣ ಪ್ರಮಾಣ ಪತ್ರ – ಗ್ರಾಮ ಲೆಕ್ಕಿಗ ಅಮಾನತು 

HIJAB

ನ್ಯಾಯಾಲಯ, ಸಂವಿಧಾನ ಮತ್ತು ಸರ್ಕಾರಕ್ಕೆ ಎಲ್ಲರೂ ಬೆಲೆ ಕೊಡಬೇಕು. ಮುಸ್ಲಿಮರು ಕಾನೂನು ಮೀರಿ ಇರುತ್ತೇವೆ ಅಂತಾ ಹೇಳಿ ಈ ದೇಶದಲ್ಲಿ ಇರಲು ಸಾಧ್ಯವಿಲ್ಲ. ಈ ದೇಶದಲ್ಲಿ ಇರಬೇಕು ಅಂತಾದರೆ ಈ ದೇಶದ ಕಾನೂನಿಗೆ ಸಂವಿಧಾನಕ್ಕೆ ಬೆಲೆ ಕೊಡಬೇಕು. ರಾಷ್ಟ್ರದ್ರೋಹಿಗಳು ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ತೆಗೆಯುತ್ತಿದ್ದೇವೆ. ಕಠಿಣಕ್ರಮ ಕೈಗೊಂಡೇ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

Comments

Leave a Reply

Your email address will not be published. Required fields are marked *