ಮತಾಂಧತೆಯೇ ಹರ್ಷನ ಕೊಲೆಗೆ ಪ್ರಮುಖ ಕಾರಣ: ಸಿ.ಟಿ.ರವಿ

ಶಿವಮೊಗ್ಗ: ಹರ್ಷನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 24 ಗಂಟೆಯೊಳಗೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಕುಮ್ಮಕ್ಕು ನೀಡಿದವರು ಯಾರು? ಯಾವ ಸಂಘಟನೆ ಇದರ ಹಿಂದೆ ಇದೆ ಎಂಬ ಮೂಲಕ್ಕೆ ಕೈಹಾಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಶಿವಮೊಗ್ಗ ನಗರದ ಸೀಗೆಹಟ್ಟಿಯ ಮೃತ ಹರ್ಷ ನಿವಾಸಕ್ಕೆ ಭೇಟಿ ನೀಡಿ, ಮೃತ ಹರ್ಷನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಜೊತೆ ಮಾತನಾಡಿದ ಅವರು, ಹರ್ಷನ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆದಾಗ ಮಾತ್ರ ನ್ಯಾಯ ಸಿಕ್ಕಂತೆ ಆಗುತ್ತದೆ ಎಂದರು.

ಕೇವಲ ಹರ್ಷನ ಕೊಲೆ ಮಾತ್ರ ಅಲ್ಲ. ರಾಜ್ಯದಲ್ಲಿ ಸಾಲು ಸಾಲು ಹಿಂದುಗಳ ಕೊಲೆ ನಡೆಯುತ್ತಿವೆ. ಯೋಜನಾಬದ್ಧವಾಗಿ ಹೇಗೆ ಲವ್ ಜಿಹಾದ್ ನಡೆಸುತ್ತಾರೆಯೋ, ಹಾಗೆಯೇ ಯೋಜನಾ ಬದ್ಧವಾಗಿ ಹಿಂದೂ ಧರ್ಮದ ಕೆಲಸದಲ್ಲಿ ತೊಡಗಿದರವನ್ನು ಹತ್ಯೆ ಮಾಡಲಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: ರಷ್ಯಾ, ಉಕ್ರೇನ್ ಸಂಘರ್ಷ ಕೃಷಿ ರಫ್ತಿನ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ

ಕೇರಳದಲ್ಲಿ ಟಾರ್ಗೆಟ್ ಮಾಡಿ ಹಿಂದೂಗಳನ್ನು ಕೊಲೆ ಮಾಡುತ್ತಿರುವಂತೆ, ಕರ್ನಾಟಕದಲ್ಲೂ ಹತ್ಯೆ ನಡೆಯುತ್ತಿದೆ. ನಮ್ಮಲ್ಲಿ ಪರೋಪಕಾರ ಮಾಡಿದರೆ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ. ಆದರೆ ಇಸ್ಲಾಂನಲ್ಲಿ ಖಾಫೀರ್ ಅವರನ್ನು ಕೊಲೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಪ್ರಚೋದನೆ ಸಿಗುತ್ತದೆ. ಈ ಬಗ್ಗೆ ಏಕೆ ಚರ್ಚೆಯಾಗುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ಕೊಲೆ ಮಾಡಲಾಗುತ್ತಿದೆ. ಭಯದ ಮೂಲಕವೇ ಈಡಿ ಪ್ರಪಂಚವನ್ನು ವಶಪಡಿಸಿಕೊಳ್ಳಲು ನೋಡುತ್ತಾರೆ ಎಂದರು.

ಮತಾಂಧತೆಯೇ ಹರ್ಷನ ಕೊಲೆಗೆ ಪ್ರಮುಖ ಕಾರಣ. ಹೀಗಾಗಿಯೇ ಎಲ್ಲ ಧರ್ಮ ಗ್ರಂಥಗಳನ್ನು ಚರ್ಚೆಗೆ ಒಳಪಡಿಸಬೇಕಿದೆ. ಕೊಲ್ಲುವುದು ಧರ್ಮವೇ ಅಲ್ಲ. ಕಾಯುವುದು ಧರ್ಮ. ಕೊಲ್ಲುವುದು ಮತಾಂಧತೆ. ಮತಾಂಧತೆ, ಧರ್ಮಕ್ಕೆ ಇರುವ ವ್ಯತ್ಯಾಸ ಗುರುತಿಸದಿರುವುದು ದುರಂತ. ಯಾವ ಧರ್ಮದಲ್ಲಿ ಒಳ್ಳೆಯದು ಇದೆಯೋ, ಅದನ್ನು ನಾವು ಅನುಸರಿಸೋಣ. ಎಲ್ಲ ಧರ್ಮ ಗ್ರಂಥಗಳ ಬಗ್ಗೆ ಚರ್ಚೆ ಮಾಡೋಣ. ಯಾವುದರಲ್ಲಿ ಮನುಕುಲಕ್ಕೆ ಒಳ್ಳೆಯದಾಗದ ವಿಷಯಗಳು ಇವೆಯೋ, ಅವುಗಳನ್ನು ಜಗತ್ತಿನಿಂದಲೇ ಹೊರ ಹಾಕೋಣ ಎಂದರು. ಇದನ್ನೂ ಓದಿ: ಆರ್ಮಿ ಪಬ್ಲಿಕ್ ಶಾಲೆಯಲ್ಲಿ 1,300 ಸಸಿ ನೆಟ್ಟಿದ ಕಮಾಂಡಿಂಗ್ ಮೇಜರ್ ಜನರಲ್!

ಭಾರತದ ಮೂಲ ನಿವಾಸಿಗಳು ಮುಂದೆ ಅಸಹಾಯಕರಾಗುವ ಸ್ಥಿತಿ ಬರಲಿದೆ. ಮುಸ್ಲಿಂ ವಿದ್ವಾಂಸರಿಗೆ ಪ್ರಶ್ನೆ ಕೇಳಲು ಬಯಸುತ್ತೇನೆ. ದಾರುಲ್ ಇಸ್ಲಾಂ, ದಾರುಲ್ ಅರಬ್ ಎಂದರೇನು? ನಿಮ್ಮಲ್ಲಿ ಸ್ವರ್ಗಕ್ಕೆ ಹೋಗುವ ದಾರಿ ಯಾವುದು? ನಿಮ್ಮ ಧರ್ಮದಲ್ಲಿ ಖಾಫಿರರನ್ನು ಕೊಂದರೆ ಸ್ವರ್ಗ ಪ್ರಾಪ್ತಿಯಂತೆ ನಿಜವೇ? ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿ ನೋಡೋಣ ಎಂದು ಪ್ರಶ್ನಿಸಿದರು.

Comments

Leave a Reply

Your email address will not be published. Required fields are marked *