ದಿ ಕಾಶ್ಮೀರ್ ಫೈಲ್ಸ್ ನನ್ನದೇ ಕುಟುಂಬದ ಕಥೆಯಂತಿತ್ತು: ಸತ್ಯ ಘಟನೆ ಹಂಚಿಕೊಂಡ ಬಾಲಿವುಡ್ ನಟಿ

ದಿ ಕಾಶೀರ್ ಫೈಲ್ಸ್ ಸಿನಿಮಾ ಬಂದ ನಂತರ ಕಾಶ್ಮೀರಿ ಕಣಿವೆಯ ಒಂದೊಂದೇ ದುರಂತ ಕಥೆಗಳು ಆಚೆ ಬರುತ್ತಿವೆ. ಕಾಶ್ಮೀರ ಪಂಡಿತರ ವಲಸೆ ಮತ್ತು ಮಾರಣಹೋಮದ ಕಥೆಗಳನ್ನು ಸಾಮಾನ್ಯರಲ್ಲ, ಸಿಲೆಬ್ರಿಟಿಗಳು ಕೂಡ ಹೇಳಿಕೊಳ್ಳುತ್ತಿದ್ದಾರೆ. ಅದೂ, ತಮ್ಮ ಕುಟುಂಬದಲ್ಲಿ ನಡೆದ ಘಟನೆಗಳನ್ನು ಎನ್ನುವುದು ವಿಶೇಷ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

ನಾಲ್ಕು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಕುಟುಂಬಕ್ಕೆ ಆದ ದೌರ್ಜನ್ಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ಮತ್ತೋರ್ವ ಬಾಲಿವುಡ್ ನಟಿ ಸಂದೀಪ ಧರ್ ಕೂಡ ತಮ್ಮ ಜೀವನದಲ್ಲಿ ನಡೆದ ಆ ದುರಂತದ ಕಥೆಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

ಗುಲಾಬಿ ಹೂವನ್ನು ನಾನು ಕೇಳಿದೆ

ಎಲ್ಲಿ ನಿನ್ನ ಪರಿಮಳ ಎಂದು

ಅದು ವಸಂತ ಮಾಸದತ್ತ ಬೆಟ್ಟು ಮಾಡಿತು…

ನಾನು ಮತ್ತೆ ವಸಂತಕ್ಕೆ ಪ್ರಶ್ನೆ ಮಾಡಿದೆ

ನಿನ್ನ ಹಣೆ ಮೇಲೇಕೆ ಗೆರೆಗಳು ಮೂಡಿದ್ದು? ಎಂದು

ಅದು ದುಃಖಿಸುತ್ತಲೇ ಹೇಳಿತು

ನನ್ನ ಗಾಯಗಳಿಗೆ ಉಪ್ಪು ಹಾಕಲಾಗಿದೆ ಎಂದು

ನಾನು ಆ ಅರಳಿದ ತೋಟವನ್ನು ಹಾಗೆಯೇ ಬಿಟ್ಟುಬಿಟ್ಟೆ

ಈಗ ಗುರಿ ಇಲ್ಲದೇ ಅಲೆದಾಡುತ್ತಿದ್ದೇನೆ

ಹೀಗೆ ಭಾವನಾತ್ಮಕವಾಗಿ ಕವಿತೆಯ ಸಾಲುಗಳನ್ನು ಬರೆದುಕೊಂಡಿರುವ ಸಂದೀಪ ಧರ್, ತನ್ನ ಕುಟುಂಬಕ್ಕಾದ ತೊಂದರೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ, ತೊಂಬತ್ತರ ದಶಕದಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ತಮ್ಮ ಮನೆ ಹೇಗಿತ್ತೆಂದು ಫೋಟೋವನ್ನು ಸಾಕ್ಷಿಯಾಗಿ ನೀಡಿದ್ದಾರೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

“ಅವರು ಹೇಳಿದರು, ಕುಟುಂಬದ ಸಮೇತ ಕಾಶ್ಮೀರ ತೊರೆಯಬೇಕೆಂದು. ರಾತ್ರೋರಾತ್ರಿ ಹೋಗುವುದು ಎಲ್ಲಿಗೆ? ಅದೂ ನಮ್ಮದೇ ನೆಲೆಬಿಟ್ಟು. ಹಿಂಸೆಗೆ ಹೊರಡಲೇಬೇಕಿತ್ತು. ಅದಕ್ಕಾಗಿ ಅಪ್ಪ ಟ್ರಕ್ ವೊಂದರ ಸಹಾಯ ಪಡೆದು. ಟ್ರಕ್ ನಲ್ಲಿ ಬಚ್ಚಿಟ್ಟುಕೊಂಡೇ ಹೋಗುವುದು ಅನಿವಾರ್ಯವಾಗಿತ್ತು. ನನ್ನ ತಂಗಿಯನ್ನು ಕಾಪಾಡಿಕೊಳ್ಳಲು ನನ್ನ ತಂದೆ ಟ್ರಕ್ ಸೀಟ್ ಕೆಳಗೆ ಬಚ್ಚಿಟ್ಟಿದ್ದರು. ಮಧ್ಯೆ ರಾತ್ರಿ ಹೀಗೆ ಹೋಗುವುದು ಎಷ್ಟು ಕಷ್ಟ ಎನ್ನುವುದನ್ನು ನಾನು ಬಲ್ಲೆ.  ದಿ ಕಾಶ್ಮೀರ್ ಫೈಲ್ಸ್ ನಲ್ಲೂ ಇಂತಹ ದೃಶ್ಯಗಳಿವೆ. ಅದನ್ನು ನೋಡಿ ನನಗೆ ಜೀವವೇ ಹೋದಂತಾಯಿತು. ತನ್ನ ತವರು ಮನೆ ಬಗ್ಗೆ ಸದಾ ನೆನಪಿಸಿಕೊಳ್ಳುತ್ತಿದ್ದ ನನ್ನ ಅಜ್ಜಿ ತೀರಿಹೋದರು. ಅದೊಂದು ನರಕಸದೃಶ್ಯ ಬದುಕು” ಎಂದು ಸಂದೀಪ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಂತಹ ಚಿತ್ರವನ್ನು ಮಾಡಿ, ಜಗತ್ತಿಗೆ ಸತ್ಯವನ್ನು ತೋರಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಧನ್ಯವಾಗಳನ್ನೂ ಅವರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *