ಹೋಳಿ ಹಬ್ಬದಲ್ಲೂ ಕಾಶ್ಮೀರ್ ಫೈಲ್ಸ್ ಹವಾ- ಅನುಪಮ್ ಖೇರ್‌ನಂತೆ ಕಾಣಿಸಿಕೊಂಡ ಯುವಕರು

ಕೊಪ್ಪಳ: ದೇಶಾದ್ಯಂತ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಿಡುಗಡೆಯಾಗಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಅಂದಿನಿಂದ ರಾಜಕಾರಣಿಗಳು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯ ಯುವಕರು ಹೋಳಿ ಹಬ್ಬದದಲ್ಲಿ ವಿಭಿನ್ನವಾಗಿ ಮುಖಕ್ಕೆ ಬಣ್ಣ ಬಳಿದು ಕಾಶ್ಮೀರ್ ಫೈಲ್ಸ್ ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ನಟಿಸಿದ ಅನುಪಮ್ ಖೇರ್ ಪಾತ್ರವನ್ನು ಜನರು ಅತೀ ಹೆಚ್ಚು ಮೆಚ್ಚಿಕೊಂಡಿದ್ದರು. ಸಿನಿಮಾ ಪ್ರಾರಂಭದಲ್ಲಿ ಅನುಪಮ್ ಖೇರ್ ಮುಖಕ್ಕೆ ಈಶ್ವರನಂತೆ ಹೋಲುವ ನೀಲಿ ಬಣ್ಣವನ್ನು ಬಳಿದ ವೇಷ ಜನರಿಗೆ ಭಾರೀ ಇಷ್ಟವಾಗಿತ್ತು. ಇದೀಗ ಕೊಪ್ಪಳ ಜಿಲ್ಲೆ ಗಂಗಾವತಿಯ ಕೆಲ ಯುವಕರು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಅನುಪಮ್ ಖೇರ್‌ರಂತೆ ಮುಖಕ್ಕೆ ನೀಲಿ ಬಣ್ಣ ಬಳಿದು ಸಿನಿಮಾ ಪ್ರಚಾರ ಮಾಡಿದ್ದಾರೆ. ಇದನ್ನೂ ಓದಿ: ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

ಮುಖಕ್ಕೆ ನೀಲಿ ಬಣ್ಣ ಬಳಿದು, ಹಣೆಗೆ ತಿಲಕ ಇಟ್ಟು ಕೆಲ ಹುಡುಗರು ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಮೊದಲಿಗೆ 6 ಜನ ನಿಂತು ತೆಗೆಸಿಕೊಂಡಿದ್ದ ಫೋಟೋ ಕೆಲವೇ ಹೊತ್ತಿನಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ಕೋಲಾರದ ಕ್ಲಾಕ್ ಟವರ್ ಮೇಲೆ 74 ವರ್ಷಗಳ ಬಳಿಕ ರಾರಾಜಿಸಿದ ತ್ರಿವರ್ಣ ಧ್ವಜ

 

Comments

Leave a Reply

Your email address will not be published. Required fields are marked *