ಶಶಿ ತರೂರು ಒಬ್ಬ ಮೂರ್ಖ: ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಖಡಕ್ ಉತ್ತರ

ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸಿಂಗಪೂರನಲ್ಲಿ ಬ್ಯಾನ್ ಮಾಡಿರುವ ವಿಚಾರ ನಿನ್ನೆಯಿಂದ ನಾನಾ ರೂಪ ಪಡೆದುಕೊಳ್ಳುತ್ತಿದೆ. ಬ್ಯಾನ್ ಮಾಡಿರುವ ಸುದ್ದಿಯನ್ನು ಶಶಿ ತರೂರು ಟ್ವಿಟ್ ಮಾಡಿದ್ದರು. ಇದೊಂದು ಸರಕಾರಿ ಪ್ರಯೋಜಿತ ಸಿನಿಮಾ ಎಂದು ಟೀಕಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಕೂಡ ಶಶಿ ತರೂರ್ ಗೆ ಚಾಟಿ ಬೀಸಿದ್ದರು. ಇದೀಗ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಕಿಡಿಕಾರಿದ್ದಾರೆ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

ದಿ ಕಾಶ್ಮೀರ್ ಫೈಲ್ಸ್ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಂಡಿದೆ. ಇದೀಗ ಓಟಿಟಿಯಲ್ಲೂ ಪ್ರರ್ದಶನಕ್ಕೆ ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಸಿನಿಮಾವನ್ನು ಸಿಂಗಾಪೂರನಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು ಚಿತ್ರತಂಡ. ಸಿಂಗಾಪೂರನಲ್ಲಿ ಪ್ರದರ್ಶನವಾಗಬೇಕಾದರೆ, ಅಲ್ಲಿಯೂ ಸೆನ್ಸಾರ್ ಆಗಬೇಕು. ಆಗ ಈ ಸಿನಿಮಾ ಸಿಂಗಾಪೂರನಲ್ಲಿ ಪ್ರದರ್ಶನಕ್ಕೆ ಯೋಗ್ಯವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿತ್ತು. ಅದನ್ನೇ ಶಶಿ ತರೂರು ಟ್ವಿಟ್ ಮಾಡಿದ್ದರು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

ಶಶಿ ತರೂರು ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರುವ ವಿವೇಕ್ ಅಗ್ನಿಹೋತ್ರಿ,, ‘ಶಶಿ ತರೂರು ಸದಾ ತಪ್ಪು ಹುಡುಕುವ ಒಬ್ಬ ಮೂರ್ಖ. ದೂರುವುದೇ ಚಟ ಮಾಡಿಕೊಂಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸುವುದಕ್ಕೆ ಸಾಧ್ಯ?’ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ‘ಶಶಿ ತರೂರು ಪತ್ನಿ ಕಾಶ್ಮೀರಿ ಎನ್ನುವುದು ನಿಜವಾದರೆ, ಅವರ ಗೌರವಕ್ಕಾದರೂ ಒಳ್ಳೆಯದನ್ನು ಯೋಚಿಸಿ’ ಎಂದು ಸಲಹೆಯನ್ನೂ ಅವರು ನೀಡಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

ಸಿಂಗಪೂರ ಸಿನಿಮಾ ಕಾನೂನು ಬಗ್ಗೆಯೂ ವಿವರಿಸಿರುವ ವಿವೇಕ್ ಅಗ್ನಿಹೋತ್ರಿ, ‘ಅದೊಂದು ಪುರಾತನ, ಅತೀ ಹಿಂದುಳಿದ ಸೆನ್ಸಾರ್ ಬೋರ್ಡ್. ಇನ್ನೂ ಪುರಾತನ ಆಲೋಚನೆಗಳನ್ನೇ ಮುಂದುವರೆಸಿಕೊಂಡು ಹೋಗುತ್ತಿದೆ. ಅದು ಅಪ್ ಗ್ರೇಡ್ ಆಗಬೇಕು’ ಎಂದು ಅವರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *