ಕನ್ನಡದಲ್ಲೂ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

ವಿವಾದಿತ ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕನ್ನಡಕ್ಕೆ ಡಬ್ ಮಾಡುವ ಪ್ಲ್ಯಾನ್ ನಡೆಯುತ್ತಿದೆ. ಈ ಕುರಿತು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಕನ್ನಡ ಅವತರಣಿಕೆಯನ್ನು ರೆಡಿ ಮಾಡಿಸಿ, ಜನರಿಗೆ ತೋರಿಸುವ ಪ್ಲ್ಯಾನ್ ಕುರಿತು ಸಿ.ಎಂ ಬಸವರಾಜ ಬೊಮ್ಮಾಯಿ ಆಪ್ತ ಸಚಿವರ ಜತೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ಸಿನಿಮಾ ಮಾಡಿರುವ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ಸದಸ್ಯರಿಗೂ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಅಲ್ಲದೇ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡುವಂತೆ ಮನವಿ ಕೂಡ ಮಾಡಿಕೊಳ್ಳಲಾಗಿತ್ತು. ಇದೀಗ ಕರ್ನಾಟಕದ ಜನತೆಗೆ ಆ ಸಿನಿಮಾವನ್ನು ತೋರಿಸುವುದಕ್ಕಾಗಿ ಡಬ್ ಮಾಡುವ ಆಲೋಚನೆ ಮಾಡಿದೆಯಂತೆ ಕರ್ನಾಟಕದ ಭಾರತೀಯ ಜನತಾ ಪಕ್ಷ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

ಕರ್ನಾಟಕ ಸರಕಾರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಮನರಂಜನಾ ತೆರಿಗೆಯನ್ನು ತಗೆದುಕೊಳ್ಳುತ್ತಿಲ್ಲ. ಅಲ್ಲದೇ, ಸಿನಿಮಾ ನೋಡುವಂತೆ ಪ್ರೇರೇಪಿಸುವ ಮಾತುಗಳನ್ನೂ ಆಡುತ್ತಿದೆ. ಕೆಲ ಸಚಿವರು ಮತ್ತು ಜನಪ್ರತಿನಿಧಿಗಳು ಆಯಾ ಕ್ಷೇತ್ರದಲ್ಲಿ ಈ ಸಿನಿಮಾವನ್ನು ಉಚಿತವಾಗಿ ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಿನಿಮಾ ನೋಡಬೇಕು ಎನ್ನುವ ಉದ್ದೇಶ ಬಿಜೆಪಿಯದ್ದು ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *