The GOAT Trailer: ದ್ವಿಪಾತ್ರದಲ್ಲಿ ಅಬ್ಬರಿಸಿದ ವಿಜಯ್ ದಳಪತಿ

ಮಿಳು ನಟ ವಿಜಯ್ (Vijay Thalapathy) ನಟನೆಯ ‘ದಿ ಗೋಟ್’ (The GOAT Trailer) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ಡಬಲ್ ರೋಲ್‌ನಲ್ಲಿ ವಿಜಯ್ ಅಬ್ಬರಿಸಿದ್ದಾರೆ. ನಟನ ಅಬ್ಬರ ಕಂಡು ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ- ನಿತ್ಯಾ ಮೆನನ್ ಫಸ್ಟ್ ರಿಯಾಕ್ಷನ್

‘ದಿ ಗೋಟ್’ ಸ್ಪೈ ಥ್ರಿಲರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಪ್ಪ ಮತ್ತು ಮಗನಾಗಿ ಎರಡು ರೋಲ್‌ಗಳಲ್ಲಿ ವಿಜಯ್ ಮಿಂಚಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ  ಎದುರಾಳಿಗಳಿಗೆ ವಿಜಯ್ ಠಕ್ಕರ್ ಕೊಟ್ಟಿದ್ದಾರೆ.

 

View this post on Instagram

 

A post shared by Archana Kalpathi (@archanakalpathi)


ಗಣೇಶ ಹಬ್ಬದ ವೇಳೆ, ಸೆ.5ರಂದು ‘ದಿ ಗೋಟ್’ ಸಿನಿಮಾ ರಿಲೀಸ್ ಆಗಲಿದೆ. ವಿಜಯ್ ಜೊತೆ ಸ್ನೇಹಾ, ಪ್ರಭುದೇವ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿಯಲ್ಲಿ ಬರಲಿರುವ ಈ ಸಿನಿಮಾ ಇದೀಗ ಟ್ರೈಲರ್‌ನಿಂದಲೇ ಕುತೂಹಲ ಮೂಡಿಸಿದೆ. ಹಾಗಾಗಿ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ. ಈ ಚಿತ್ರದ ರಿಲೀಸ್ ಬಳಿಕ ‘ದಳಪತಿ 69’ನೇ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದು ಅವರ ವೃತ್ತಿ ಜೀವನದ ಕೊನೆಯ ಸಿನಿಮಾವಾಗಿರಲಿದೆ.

ಈಗಾಗಲೇ ವಿಜಯ್ ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವುದು ಗೊತ್ತೆ ಇದೆ. ‘ತಮಿಳ ವೆಟ್ರಿ ಕಳಗಂ’ ಪಕ್ಷದ ಮೂಲಕ ಜನಸೇವೆ ಮಾಡಲು ಮತ್ತು ಸಿನಿಮಾ ಬಿಟ್ಟು ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.