Ind vs Aus T20I | ಮೊದಲ ಪಂದ್ಯ ಮಳೆಯಾಟಕ್ಕೆ ಬಲಿ – ಭಾರತಕ್ಕೆ ನಿರಾಸೆ

ಕ್ಯಾನ್ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ (Ind vs AUS) ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮಳೆಯಾಟವೇ ಮೇಲಾಗಿದೆ. ನಿರಂತರ ಮಳೆ (Rain) ಸುರಿಯುತ್ತಿದ್ದ ಕಾರಣ ಇಂದಿನ ಪಂದ್ಯವನ್ನ ರದ್ದುಗೊಳಿಸಲಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ಇಂದಿನಿಂದ ಶುರುವಾಗಿದ್ದು, ಮೊದಲ ಪಂದ್ಯ ಮಳೆಗೆ ಬಲಿಯಾಗಿದೆ. ಕ್ಯಾನ್ಬೆರಾದ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 35 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತು. 5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 43 ರನ್‌ ಗಳಿಸಿದ್ದಾಗ ಮೊದಲ ಬಾರಿಗೆ ಮಳೆ ಶುರುವಾಯ್ತು. ಕೆಲ ಕಾಲ ಬಿಡುವು ಕೊಟ್ಟಿತ್ತು. ಇದನ್ನೂ ಓದಿ: ಆಸೀಸ್‌ ವಿರುದ್ಧ 2 ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಸೂರ್ಯ

ಮತ್ತೆ ಬ್ಯಾಟಿಂಗ್‌ ಶುರು ಮಾಡಿದ ಗಿಲ್‌, ಸೂರ್ಯಕುಮಾರ್‌ ಯಾದವ್‌ (Suryakumar Yadav) ಜೋಡಿ ಆಸೀಸ್‌ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿತು. 10ನೇ ಓವರ್‌ನ ಮೊದಲ 4 ಎಸೆತಗಳಲ್ಲೇ ವೇಗಿ ನಾಥನ್‌ ಎಲ್ಲಿಸ್‌ಗೆ ಸೂರ್ಯ 15 ರನ್‌ ಬಾರಿಸಿದ್ದರು. ಇದರೊಂದಿಗೆ ಭಾರತ ಬೃಹತ್‌ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿತ್ತು. ಅಲ್ಲದೇ ಪಂದ್ಯ ಗೆಲ್ಲುವ ವಿಶ್ವಾಸವೂ ಇತ್ತು. ಆದ್ರೆ ಮಳೆಯ ಬಿಡುವುಕೊಡದ ಹಿನ್ನೆಲೆ ಪಂದ್ಯವನ್ನು ಯಾವುದೇ ಫಲಿತಾಂಶವಿಲ್ಲದೇ ರದ್ದುಗೊಳಿಸಲಾಯಿತು. ಅಕ್ಟೋಬರ್‌ 31ರ ಶುಕ್ರವಾರ ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯ ನಡೆಯಲಿದೆ. ಇದನ್ನೂ ಓದಿ: ICC ODI Rankings | ನಿವೃತ್ತಿ ವದಂತಿ ನಡುವೆಯೂ ನಂ.1 ಪಟ್ಟಕ್ಕೇರಿದ ಹಿಟ್‌ಮ್ಯಾನ್‌

ಭಾರತದ ಪರ ಆರಂಭಿಕ ಅಭಿಷೇಕ್‌ ಶರ್ಮಾ 19 ರನ್‌ ಗಳಿಸಿ ಔಟಾದ್ರೆ, ನಾಯಕ ಸೂರ್ಯಕುಮಾರ್‌ ಯಾದವ್‌ 39 ರನ್‌ (24 ಎಸೆತ, 2 ಸಿಕ್ಸರ, 3 ಬೌಂಡರಿ), ಶುಭಮನ್‌ ಗಿಲ್‌ 37 ರನ್‌ (20 ಎಸೆತ, 1 ಸಿಕ್ಸರ್‌, 4 ಬೌಂಡರಿ) ಗಳಿಸಿ ಅಜೇಯರಾಗುಳಿದರು.