ತಮಿಳಿನ ಸೂಪರ್ ಸ್ಟಾರ್ ನಿರ್ದೇಶಕ ಬಾಲ ತಮ್ಮ 18 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ತಮಿಳಿನ ಖ್ಯಾತ ನಟ, ರಜನಿಕಾಂತ್ ಅಳಿಯ ಧನುಷ್ ವಿಚ್ಛೇದನದ ಬೆನ್ನೆಲ್ಲೆ ಬಾಲ ನಿರ್ಧಾರ ಸಿನಿಮಾ ರಂಗದವರ ಬಗ್ಗೆ ಅನುಮಾನ ಪಡುವಂತೆ ಮಾಡಿದೆ. ಇದನ್ನೂ ಓದಿ : ರಾಜಮೌಳಿ ಹೊಸ ಸಿನಿಮಾದಲ್ಲಿ ಕಿಚ್ಚ ಸುದೀಪ್ : ಏನಿದು ಹೊಸ ಸುದ್ದಿ?

ನಿರ್ದೇಶಕ ಬಾಲ ಮತ್ತು ಮುತ್ತು ಮಲಾರ್ 2004 ಜುಲೈ 7ರಂದು ಮಧುರೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಸುಖಿ ದಾಂಪತ್ಯಕ್ಕೆ ಸಾಕ್ಷಿಯಾಗಿ ಮಗಳೊಬ್ಬಳು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ದಂಪತಿಯ ನಡುವೆ ಹೊಂದಾಣಿಕೆ ಆಗದ ಕಾರಣಕ್ಕಾಗಿ ಚೆನ್ನೈನ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈಗಾಗಲೇ ನಾಲ್ಕು ವರ್ಷಗಳಿಂದ ಅವರು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರಿಂದ ಬೇಗ ವಿಚ್ಛೇದನ ಸಿಕ್ಕಿದೆ. ಮಾರ್ಚ್ 5 ರಿಂದ ಕಾನೂನಾತ್ಮಕವಾಗಿ ಅವರು ಬೇರೆಯಾಗಿದ್ದಾರೆ. ಇದನ್ನೂ ಓದಿ : ಮಾ.11ರ 12:46 ವೇಳೆ ಸೇವ್ ಮಾಡ್ಕೊಳ್ಳಿ: ಕನ್ ಫ್ಯೂಸ್ ಮಾಡಿದ ಉಪೇಂದ್ರ

ತಮಿಳಿನ ಸೂಪರ್ ಸ್ಟಾರ್ ಗಳಿಗೆ ನಿರ್ದೇಶನ ಮಾಡಿದ ಕೀರ್ತಿ ಬಾಲ ಅವರದ್ದು. ಸದ್ಯ ಸೂರ್ಯ ಅವರಿಗಾಗಿ ಬಾಲ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ.

Leave a Reply