ಊಟ ನೀಡಲು ನಿರಾಕರಿಸಿದ ಹೋಟೆಲ್‌ಗೆ ಲಾರಿ ನುಗ್ಗಿಸಿದ ಚಾಲಕ – ವೀಡಿಯೋ ವೈರಲ್

ಮುಂಬೈ: ಊಟ ನೀಡಲು ನಿರಾಕರಿಸಿದ ಹೋಟೆಲ್‌ವೊಂದಕ್ಕೆ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ಲಾರಿ ನುಗ್ಗಿಸಿದ ಘಟನೆ ಪುಣೆಯಲ್ಲಿ (Pune) ನಡೆದಿದ್ದು, ಇದೀಗ ವೀಡಿಯೋ ವೈರಲ್ ಆಗಿದೆ.

ಚಾಲಕನು ಸೋಲಾಪುರದಿಂದ ಪುಣೆ ಕಡೆಗೆ ಲಾರಿ ಸಾಗಿಸುತ್ತಿದ್ದ. ಮಾರ್ಗಮಧ್ಯದಲ್ಲಿ ಆತ ಹೋಟೆಲ್‌ವೊಂದರಲ್ಲಿ ಲಾರಿ ನಿಲ್ಲಿಸಿ ಊಟ ಕೇಳಿದ್ದಾನೆ. ಆದರೆ ಹೋಟೆಲ್ ಮಾಲೀಕ ಆತನಿಗೆ ಊಟ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಮೊದಲೇ ಮದ್ಯ ಸೇವಿಸಿ ಅಮಲಿನಲ್ಲಿದ್ದ ಆತ ಸಿಟ್ಟಿಗೆದ್ದು ಲಾರಿಯನ್ನು ಹೋಟೆಲ್‌ಗೆ ನುಗ್ಗಿಸಿದ್ದಾನೆ. ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಗಣೇಶ ಚತುರ್ಥಿ ಆಚರಣೆ – ಆರೋಪಿ ದರ್ಶನ್‌ಗಿಲ್ಲ ವಿನಾಯಕನ ದರ್ಶನ ಭಾಗ್ಯ

ಹೋಟೆಲ್‌ಗೆ ಲಾರಿ ನುಗ್ಗಿಸುತ್ತಿದ್ದಂತೆಯೇ ಅಕ್ಕಪಕ್ಕದಲ್ಲಿದ್ದವರು ಲಾರಿಗೆ ಕಲ್ಲಿನಿಂದ ಹೊಡೆಯಲು ಪ್ರಾರಂಭಿದ್ದರು. ಆದರೂ ಕೂಡ ಲಾರಿ ಚಾಲಕ ನಿಲ್ಲಿಸದೆ ಲಾರಿ ಚಲಾಯಿಸಿ ಹಾನಿಗೊಳಿಸಿದ್ದಾನೆ.

ಲಾರಿ ಹೋಟೆಲ್‌ಗೆ ನುಗ್ಗಿದ ಪರಿಣಾಮ ಹೋಟೆಲ್‌ನ ಮುಂಭಾಗಕ್ಕೆ ಹಾನಿಯಾಗಿದ್ದು, ಹೋಟೆಲ್ ಆವರಣದಲ್ಲಿ ನಿಂತಿದ್ದ ಕಾರೊಂದು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಇದನ್ನೂ ಓದಿ: 2 ಸಾವಿರ ಮಕ್ಕಳಿಂದ ಗಣೇಶನ ಆಕೃತಿ – ಐನೂರು ಅಡಿ ಎತ್ತರದಿಂದ ಚಿತ್ರೀಕರಣ

ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.