ಸೇತುವೆ ಮುಳುಗಿದರೂ ಲೆಕ್ಕಿಸದೇ ಬಸ್ ದಾಟಿಸಿದ ಚಾಲಕ

ವಿಜಯನಗರ: ನಿರಂತರ ಮಳೆಯಿಂದಾಗಿ ಸೇತುವೆಯ ಮೇಲೆ ಮಳೆ ನೀರು ತುಂಬಿ ಹರಿಯುತ್ತಿದ್ದರೂ, ಅದನ್ನು ಲೆಕ್ಕಿಸದೇ ಚಾಲಕನೊಬ್ಬ ಬಸ್‍ನ್ನು ದಾಟಿಸಿದ ದುಸ್ಸಾಹಸದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಾಳ್ ತಿಮ್ಮಲಾಪುರದ ಬಳಿ ನಡೆದಿದೆ.

ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಯ ಮೇಲೆ ನೀರು ತುಂಬಿ ಹರಿಯುತ್ತಿತ್ತು. ಅರ್ಧ ಬಸ್ ಮುಳುಗೋವಷ್ಟು ನೀರು ಹರಿಯುತ್ತಿದ್ರೂ ಇಲ್ಲೊಬ್ಬ ಚಾಲಕ ಆ ಸೇತುವೆಯ ಮೇಲೆ ನೀರು ಇರುವುದನ್ನು ಲೆಕ್ಕಿಸದೇ ಬಸ್ ದಾಟಿಸಿದ್ದಾನೆ. ಇದನ್ನೂ ಓದಿ: ಮಂಗಳಮುಖಿಯರು ಹೊಡೆದಾಡಿದ್ರೆ ಯಾರನ್ನ ಕಳುಹಿಸಲಿ: ಸಿಎಂ ಇಬ್ರಾಹಿಂ

ಇದೀಗ ಸಾರಿಗೆ ಬಸ್ ಚಾಲಕನ ಸಮಯ ಪ್ರಜ್ಞೆ ಅಥವಾ ದುಸ್ಸಾಹಸದ ಬಗ್ಗೆ ತೀವ್ರ ಪರ ವಿರೋಧ ಚರ್ಚೆಯಾಗುತ್ತಿದೆ. ಕಷ್ಟವಾದರೂ ಪ್ರಾಣದ ಹಂಗು ತೊರೆದು ಬಸ್ ದಾಟಿಸಿದ್ದಾನೆ ಅನ್ನೋ ಒಂದು ಕಡೆಯಾದ್ರೆ, ಅಷ್ಟು ಮಳೆ ನೀರಲ್ಲಿ, ಹಳ್ಳ ದಾಟಿಸೋ ಅವಶ್ಯಕತೆ ಇತ್ತೇ ಎನ್ನುವ ಮಾತು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಈಶ್ವರಪ್ಪಗೆ ಒಂದು ನ್ಯಾಯ, ಶ್ರೀರಾಮುಲುಗೆ ಒಂದು ನ್ಯಾಯನಾ: ತಿಪ್ಪೇಸ್ವಾಮಿ

Comments

Leave a Reply

Your email address will not be published. Required fields are marked *