ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು: M.B ಪಾಟೀಲ್

ಬೆಂಗಳೂರು: ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಸಂಕಷ್ಟ ಸೂತ್ರ ಸಿದ್ಧ ಮಾಡಬೇಕು ಅಂತ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ (M B Patil) ಒತ್ತಾಯ ಮಾಡಿದ್ದಾರೆ.

ಸುಪ್ರೀಂಕೋರ್ಟ್ (Supreme Court) ನಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂಕೋರ್ಟ್ ತೀರ್ಪು ಅತ್ಯಂತ ದುರಾದೃಷ್ಟಕರ. ನಮ್ಮಲ್ಲಿ ಕುಡಿಯೋಕೆ ನೀರಿಲ್ಲ. ಕೆಲವೇ ತಿಂಗಳಲ್ಲಿ ಬೆಂಗಳೂರಿಗೂ ಕುಡಿಯೋ ನೀರಿಗೂ ಸಮಸ್ಯೆ ಆಗುತ್ತದೆ. ಇಂತಹ ಸಮಯದಲ್ಲಿ ಎರಡು ಬೋರ್ಡ್ ಗಳು ಮತ್ತು ಸುಪ್ರೀಂಕೋರ್ಟ್ ವಾಸ್ತವ ಸ್ಥಿತಿಯನ್ನು ನೋಡಿಲ್ಲ. ನಮ್ಮ ಅಣೆಕಟ್ಟು, ತಮಿಳುನಾಡಿನ ಅಣೆಕಟ್ಟಿನಲ್ಲಿ (Tamilnadu Dam) ನೀರಿದೆ ಅಂತ ನೋಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಎಕ್ಸ್ ಪರ್ಟ್ ಟೀಂ ಕಳಿಸಿ ಸ್ಥಿತಿಗತಿಗಳ ಬಗ್ಗೆ, ವಾಸ್ತವ ಅಂಶ ಪರಿಶೀಲನೆ ಮಾಡಿಸಬೇಕು.ನೀರು ಬಿಡುವ ಆದೇಶ ಪರಿಶೀಲನೆ ಮಾಡಲು ಕೇಂದ್ರ ಮುಂದಾಗಬೇಕು ಎಂದರು.

ಕಾವೇರಿ ವಿಚಾರವಾಗಿ (Cauvery Water) ಕೇಂದ್ರ ಜಲಶಕ್ತಿ ಇಲಾಖೆ ಮಧ್ಯ ಪ್ರವೇಶ ಮಾಡಬೇಕು. ಎಕ್ಸ್ ಪರ್ಟ್ ಕಮಿಟಿ ಕಳಿಸಬೇಕು. ಅಲ್ಲಿವರೆಗೂ ನೀರು ಬಿಡೋದನ್ನ ತಾತ್ಕಾಲಿಕ ನಿಲ್ಲಿಸಬೇಕು. ಎಕ್ಸ್ ಪರ್ಟ್ ಕಮಿಟಿ ವರದಿ ಕೊಟ್ಟ ಮೇಲೆ ಮುಂದೆ ನೀರು ಬಿಡುವ ವ್ಯವಸ್ಥೆ ಮಾಡಬೇಕು ಎಂದರು. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಗಲಾಟೆಗಳಾದ್ರೆ ಸರ್ಕಾರವೇ ಹೊಣೆ: ಆರ್.ಅಶೋಕ್

ಈಗ ನಮಗೆ ಸಂಕಷ್ಟದ ದಿನ. ಅತ್ಯಂತ ಗಂಭೀರವಾದ ಸಮಸ್ಯೆ ಇದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ (Pralhad Joshi), ಶೋಭಾ ಕರಂದ್ಲಾಜೆ (Shobha Karandlaje) ಅವರು, ರಾಜ್ಯದ ಸಂಸದರು, ಮಾಜಿ ಸಿಎಂ ಬೊಮ್ಮಾಯಿ (Basavaraj Bommai), ಯಡಿಯೂರಪ್ಪ (BS Yediyurappa) ಅವರು ಕೂಡಾ ಕೇಂದ್ರ ಸರ್ಕಾರಕ್ಕೆ, ಪ್ರಧಾನಿಗಳಿಗೆ ಮನವರಿಕೆ ಮಾಡಬೇಕು. ನಮ್ಮ ರಾಜ್ಯದ ಹಿತ ಕೇಂದ್ರದ ನಮ್ಮ ಸಚಿವರು ಕಾಯಬೇಕು. ಅನಂತ್ ಕುಮಾರ್ ಹೇಗೆ ಸಹಕಾರ ಕೊಡ್ತಿದ್ದರು ಅದರಂತೆ ಸಹಕಾರ ಕೊಡಬೇಕು. ಈಗಲೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ನಮ್ಮ ರಾಜ್ಯದ ಕೇಂದ್ರ ಸಚಿವರು, ಸಂಸದರು ಮಾಡಬೇಕು. ಎಕ್ಸ್ ಪರ್ಟ್ ಕಮಿಟಿ ಕಳಿಸಿ ಪರಿಸ್ಥಿತಿ ಸರಿ ಮಾಡೋ ಕೆಲಸ ಮಾಡಬೇಕು. ಸಂಕಷ್ಟ ಸೂತ್ರವನ್ನ ಕೂಡಲೇ ಸಿದ್ಧ ಮಾಡಬೇಕು. ವೈಜ್ಞಾನಿಕ, ವಸ್ತುಸ್ಥಿತಿ ಇರೋ ಸಂಕಷ್ಟ ಸೂತ್ರವನ್ನ ಕೇಂದ್ರ ಸರ್ಕಾರ ಮಾಡಬೇಕು ಅಂತ ಒತ್ತಾಯ ಹಾಕಿದ್ರು.

ನಾನು ಮಂತ್ರಿ ಆಗಿದ್ದಾಗ ಕಾವೇರಿ ತೀರ್ಪು ಬಂದಿತ್ತು. ನಾವು 192 ಟಿಎಂಸಿ ಬಿಡಬೇಕಿತ್ತು. ಆಗ ನಮ್ಮ ಕಾನೂನು ತಂಡ ಬಲವಾದ ವಾದ ಮಾಡಿದ್ವಿ. ಬಳಿಕ 192 ರಿಂದ 177 ಟಿಎಂಸಿಗೆ ಇಳಿಸಿತ್ತು. ಬೆಂಗಳೂರಿಗೆ ನೀರು ಕೇಳಿದಾಗ ತಮಿಳುನಾಡು ವಿರೋಧ ಮಾಡಿತ್ತು. ಬಳಿಕ ನಮ್ಮ ವಕೀಲರ ತಂಡ ಸಮರ್ಪಕವಾಗಿ ವಾದ ಮಂಡನೆ ಮಾಡಿತ್ತು. ಕುಡಿಯುವ ನೀರಿಗಾಗಿ ವಾದ ಮಾಡಿದ್ರು. ವಾದ ಮಾಡೋವಾಗ ಇಂದಿರಾಗಾಂಧಿ ಕೇಸ್ ಕೂಡಾ ಉಲ್ಲೇಖ ಮಾಡಿ ನಾರಿಮನ್ ವಾದ ಮಾಡಿದ್ರು. ಮಾನವೀಯತೆ ಆಧಾರದಲ್ಲಿ ನೀರಿನ ಬಗ್ಗೆ ಅಂದು ಬೆಂಗಳೂರಿಗೆ ನೀರು ಕೊಡಲು ಸುಪ್ರೀಂಕೋರ್ಟ್ ಒಪ್ಪಿಗೆ ಕೊಟ್ಟಿತ್ತು. ನಮ್ಮ ಸಮರ್ಪಕ ವಾದದಿಂದ ನೀರು ನಮಗೆ ಸಿಕ್ಕಿತ್ತು. ಇದರಿಂದ ಮೇಕೆದಾಟು ಮಾಡೋಕೆ ಶಕ್ತಿ ಬಂತು. ಮೇಕೆದಾಟು ಯೋಜನೆಯೂ ಆಗಬೇಕು.ತಮಿಳುನಾಡಿಗೆ ಇದರಿಂದ ಲಾಭ ಆಗುತ್ತದೆ. ಆದ್ರೆ ತಮಿಳುನಾಡು ಅರ್ಥ ಅರ್ಥ ಮಾಡಿಕೊಂಡಿಲ್ಲ. ಮೇಕೆದಾಟು (Mekedatu Project) ವಿಚಾರದಲ್ಲೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಅಂತ ಆಗ್ರಹಿಸಿದ್ರು.

ಕಾವೇರಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. ಸಮರ್ಥವಾಗಿ ವಾದ ಮಂಡನೆ ಮಾಡಿದೆ. ನಮ್ಮ ಕಾನೂನು ತಂಡ ಇದೆ. ಈಗ ನಾರಿಮನ್ ಇಲ್ಲ. ಆದರು ಉತ್ತಮವಾಗಿ ಲಾಯರ್ ಗಳ ತಂಡ ವಾದ ಮಂಡನೆ ಮಾಡ್ತಿದ್ದಾರೆ.ಸರ್ಕಾರ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಲಾಯರ್ ಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮೇಲ್ಮನವಿ ಸಲ್ಲಕೆ ಮಾಡಬೇಕಾ ಅಂತ ಕಾನೂನು ತಜ್ಞರು ನಿರ್ಧಾರ ಮಾಡ್ತಾರೆ. ಆದರೂ ಸರ್ಕಾರ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಎಕ್ಸ್ ಪರ್ಟ್ ಕಮಿಟಿ ಕಳಿಸಬೇಕು ಮತ್ತು ಸಂಕಷ್ಟ ಸೂತ್ರ ಸಿದ್ದ ಮಾಡಬೇಕು ಅಂತ ಕೇಂದ್ರದ ಕಡೆ ಬೊಟ್ಟು ಮಾಡಿದ್ರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]