ಗೌರಿಗೆ ಬಿದ್ದಿರುವ ಗುಂಡು ನನಗೂ ಬೀಳಬಹುದು: ದಿನೇಶ್ ಅಮೀನ ಮಟ್ಟು

ಮಂಗಳೂರು: ಮೊನ್ನೆ ಗೌರಿಗೆ ಬಿದ್ದಿರುವ ಗುಂಡು ನನಗೂ ಬೀಳಬಹುದು. ನನ್ನನ್ನು ಮಟ್ಟ ಹಾಕಲು ಆರ್‍ಎಸ್‍ಎಸ್ ಸಭೆಯಲ್ಲಿ ಚರ್ಚೆ ನಡೆದಿದೆ. ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯವಾಗಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ ಮಟ್ಟು ಹೇಳಿದ್ದಾರೆ.

ಇಂಟಲಿಜೆನ್ಸ್ ಮಾಹಿತಿ ಪ್ರಕಾರ, ಕಾರ್ಕಳದಲ್ಲಿ ನಡೆದ ಸಭೆಯಲ್ಲಿ ಮಟ್ಟುವನ್ನು ಮಟ್ಟು ಹಾಕಬೇಕೆಂದು ಕೆಲವರು ನಿರ್ಣಯಿಸಿದ್ದಾರೆ. ಸಾವಿನ ಬಗ್ಗೆ ನನಗೆ ಭಯವಿಲ್ಲ, ಮಾಡಬೇಕಾದ ಕೆಲಸಗಳನ್ನು ಸತ್ತು, ಅತೃಪ್ತ ಆತ್ಮಗಳಾಗಿ ಸಾಯಬಾರದು. ಸಾವು ನಿಶ್ಚಿತ ಆದರೆ ಅದರ ಬಗ್ಗೆ ನನಗೆ ಯಾವತ್ತೂ ಭಯವಿಲ್ಲ. ಆ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಸಹ ಭಾಗಿಯಾಗಿದ್ದರು ಎಂದು ನಾರಾಯಣಗುರು ವಿಚಾರ ಕಮ್ಮಟದಲ್ಲಿ ಅಮೀನ ಮಟ್ಟು ಉಪನ್ಯಾಸದಲ್ಲಿ ತಿಳಿಸಿದ್ದಾರೆ.

ನಾರಾಯಣಗುರುಗಳ ಚಿಂತನೆ ನಿಮಗೆ ಪ್ರೇರಣೆಯಾಗಬೇಕು. ಯಾವ ಕಾರಣಕ್ಕಾಗಿ ನಾವಿಲ್ಲಿ ಸೇರಿದ್ದೇವೆ. ಅದು ಸಾಧ್ಯವಾಗಬೇಕು. ಈ ಜಿಲ್ಲೆಯನ್ನು ವಿದ್ಯಾವಂತರ, ಬುದ್ದಿವಂತರ, ಸಂಸ್ಕೃತರ, ಜ್ಞಾನವಂತರ, ಉದ್ಯಮಶೀಲರ ನಾಡನ್ನಾಗಿ ನಾರಾಯಣ ಗುರುಗುಳು ಮಾಡಿದ್ದಾರೆ. ಕುಂಕುಮ ಬಳಿದು, ಹಣೆಗೆ ಕೇಸರಿ ಪಟ್ಟಿ ಕಟ್ಟಿ ಕೈಯಲ್ಲಿ ಕತ್ತಿ ಕೊಟ್ಟಿರುವುದು ನಮ್ಮ ಹಿರಿಯರಲ್ಲ. ನಮ್ಮ ಹಿರಿಯರು ತ್ಯಾಗ, ಹೋರಾಟದಿಂದ ಬೆವರು ಸುರಿಸಿ ಈ ಜಿಲ್ಲೆಯನ್ನು ಕಟ್ಟಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಅನ್ಯಧರ್ಮದ ಬಗ್ಗೆ ಕೂಗುವುದಕ್ಕಿಂತ ಮುಂಚೆ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಅಮೀನ ಮಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವಕರಿಗೆ ಹೇಳಿದರು.

Comments

Leave a Reply

Your email address will not be published. Required fields are marked *