ನಿರ್ಮಾಪಕರೊಬ್ಬರು ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ನಿರ್ಮಾಪಕನ ಆಫೀಸ್ ಮುಂದೆ ಬೆತ್ತಲೆಯಾಗಿ ಪ್ರತಿಭಟನೆ ಮಾಡಿದ ಘಟನೆ ತೆಲುಗು ಚಿತ್ರೋದ್ಯಮದಲ್ಲಿ ನಡೆದಿದೆ. ತೆಲುಗು ಸಿನಿಮಾ ರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ತಯಾರಿಸಿದ ನಿರ್ಮಾಪಕ ಹಾಗೂ ವಿತರಕರೂ ಆಗಿರುವ ಬನ್ನಿ ವಾಸು ಆಫೀಸ್ ಮುಂದೆ ಹೈಡ್ರಾಮಾ ನಡೆದಿದ್ದು, ನಟಿ ಸುನಿತಾ ಬೋಯಾ ಬೆತ್ತಲೆಯಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೆಳಗ್ಗೆ ಬನ್ನಿ ವಾಸು ಅವರ ಗೀತಾ ಆರ್ಟ್ಸ್ ಕಚೇರಿ ಮುಂದೆ ಬಂದ ನಟಿ ಸುನಿತಾ ಬೋಯಾ, ಬೆತ್ತಲೆಯಾಗಿ ಪ್ರತಿಭಟನೆಗೆ ಕೂತಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಟಿಯನ್ನು ವಶಕ್ಕೆ ಪಡೆದಿದ್ದಾರೆ. ಆನಂತರ ಆಕೆಗೆ ಬಟ್ಟೆ ಹಾಕಿ ಸಮಾಧಾನದ ಮಾತುಗಳನ್ನೂ ಆಡಿದ್ದಾರೆ. ಸುನಿತಾಗೆ ಆದ ಮೋಸವನ್ನು ಕೇಳಿದ್ದಾರೆ. ನಂತರ ಆಕೆಗೆ ಸ್ವಲ್ಪ ಹಣ ಕೊಟ್ಟೂ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

ಬನ್ನಿ ವಾಸು ನಿರ್ಮಾಣದ ಧಾರಾವಾಹಿಯಲ್ಲಿ ಸುನಿತಾ ನಟಿಸುತ್ತಿದ್ದರಂತೆ. ಅವರಿಗೆ ಕೊಡಬೇಕಾದ ಹಣವನ್ನು ಪಾವತಿಸಿಲ್ಲವಂತೆ. ಹಾಗಾಗಿ ತಮಗೆ ಬದುಕು ನಡೆಸಲೂ ಕಷ್ಟವಾಗುತ್ತಿದೆ. ನನಗೆ ದುಡ್ಡು ಕೊಡದೇ ಸತಾಯಿಸುತ್ತಿದ್ದಾರೆ ಎಂದು ನಟಿ ಪೊಲೀಸ್ ಮುಂದೆ ಹೇಳಿಕೊಂಡಿದ್ದಾರೆ. ಕೂಡಲೇ ವಾಸು ಅವರನ್ನು ಪೊಲೀಸರು ಸಂಪರ್ಕಿಸಿ, ಹಣ ಕೊಡುವ ಭರವಸೆಯನ್ನೂ ನಟಿಗೆ ಕೊಟ್ಟಿದ್ದಾರಂತೆ.

Leave a Reply