ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ

ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮಂಥೆರೋ (Tharun – Sonal) ತಮ್ಮ ಪ್ರೀತಿಗೆ ನೀರೆರೆದು ಪೋಷಿಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ಆರತಕ್ಷತೆ ಸಂಭ್ರಮದಲ್ಲಿ ನೆನಪಿಸಿಕೊಂಡಿದ್ದಾರೆ.

ಆರತಕ್ಷತೆ ಆಗಮಿಸಿದ ನವಜೋಡಿ ತರುಣ್‌ ಹಾಗೂ ಸೋನಲ್‌ ಅವರನ್ನು ಮ್ಯೂಸಿಕ್‌ ಬ್ಯಾಂಡ್‌ ಕಾಟೇರ ಸಿನಿಮಾದ ʼಯಾವ ಜನುಮದ ಗೆಳತಿʼ ಹಾಡನ್ನು ನುಡಿಸುವ ಮೂಲಕ‌ ಅದ್ಧೂರಿಯಾಗಿ ಸ್ವಾಗತಿಸಿತು.

ಬ್ಲ್ಯಾಕ್ ಕಲರ್ ಗೋಲ್ಡ್ ಎಂಬ್ರಾಯ್ಡರಿ ಕಾಂಬಿನೇಷನ್ ಶೆರ್ವಾನಿಯಲ್ಲಿ ತರುಣ್ ಸುಧೀರ್ ಮಿಂಚುತ್ತಿದ್ದರೆ, ಗೋಲ್ಡ್ ಕಲರ್ ಲೆಹಂಗದಲ್ಲಿ ವಧು ಸೋನಲ್ ಕಂಗೊಳಿಸುತ್ತಿದ್ದಾರೆ.

ದರ್ಶನ್‌ (Darshan) ಅವರಿಂದಲೇ ನಮ್ಮ ಪ್ರೀತಿ ಶುರುವಾಯಿತು ಎಂದು ಸೋನಲ್‌ ಹಾಗೂ ತರುಣ್‌ ಅವರು ಹೇಳಿಕೊಂಡಿದ್ದರು.

ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ ಸಭಾಂಗಣದಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯುತ್ತಿದೆ. ಅವಾರ್ಡ್‌ ಫಂಕ್ಷನ್‌ (Award ceremony) ಥೀಮ್‌ನಲ್ಲಿ ಸಿದ್ಧವಾದ ವೇದಿಕೆಯಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯಲಿದೆ. ಸಂಪೂರ್ಣವಾಗಿ ಕೆಂಪು ಬಣ್ಣದ ಅಲಂಕಾರದಿಂದ ಮದುವೆ ಹಾಲ್ ಮಿಂಚುತ್ತಿದೆ. ಕೆಂಪು ಹೂವುಗಳು, ಕೆಂಪು ಕಾರ್ಪೆಟ್, ಕೆಂಪು ದೀಪಗಳನ್ನು ಅಲಂಕಾರಕ್ಕೆ ಬಳಕೆ ಮಾಡಿದ್ದು, ಪ್ರೀತಿಸಿ ಮದುವೆಯಾಗುತ್ತಿರುವ ತಾರಾಜೋಡಿಗೆ ಜೋಡಿಗೆ ರೆಡ್ ಥೀಮ್ ವೇದಿಕೆ ಸಿದ್ಧಪಡಿಸಲಾಗಿದೆ.