Tharun Sonal Wedding Reception: ಅವಾರ್ಡ್‌ ಫಂಕ್ಷನ್‌ ಥೀಮ್‌ನಲ್ಲಿದೆ ವಿವಾಹ ಆರತಕ್ಷತೆ ವೇದಿಕೆ

ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಆರತಕ್ಷತೆಗೆ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಸಭಾಂಗಣ ಸಂಪೂರ್ಣ ಸಜ್ಜಾಗಿದೆ. ಅವಾರ್ಡ್‌ ಫಂಕ್ಷನ್‌ (Award ceremony) ಥೀಮ್‌ನಲ್ಲಿ ಸಿದ್ಧವಾದ ವೇದಿಕೆಯಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯಲಿದೆ.

ಸಂಪೂರ್ಣವಾಗಿ ಕೆಂಪು ಬಣ್ಣದ ಅಲಂಕಾರದಿಂದ ಮದುವೆ ಹಾಲ್ ಮಿಂಚುತ್ತಿದೆ. ಕೆಂಪು ಹೂವುಗಳು, ಕೆಂಪು ಕಾರ್ಪೆಟ್, ಕೆಂಪು ದೀಪಗಳು ಅಲಂಕಾರಕ್ಕೆ ಬಳಕೆ ಮಾಡಿದ್ದು, ಪ್ರೀತಿಸಿ ಮದುವೆಯಾಗುತ್ತಿರುವ ತಾರಾಜೋಡಿಗೆ ಜೋಡಿಗೆ ರೆಡ್ ಥೀಮ್ ವೇದಿಕೆ ಸಿದ್ಧವಾಗಿದೆ.

ತರುಣ್ ಅವರು ಸಿನಿಮಾ ಕ್ಷೇತ್ರದಲ್ಲಿ ಇರೋದ್ರಿಂದ ಅವಾರ್ಡ್ ಸೆರ್ಮನಿ ಥೀಮ್ ಮಾಡೋಕೆ ಹೇಳಿದ್ದರು. ತರುಣ್ ಹಾಗೂ ಸೋನಲ್ ಡಿಸ್ಕಸ್ ಮಾಡಿ ತೀರ್ಮಾನ ತೆಗೆದುಕೊಂಡಿದ್ದರು. ಕಂಪ್ಲೀಟ್ ರೆಡ್ ಥೀಮ್ ನಲ್ಲೇ ಇದೆ. ಅತಿಥಿಗಳ ಆಸನದ ವ್ಯವಸ್ಥೆಯಲ್ಲೂ ಅವಾರ್ಡ್ ಸಮಾರಂಭದಲ್ಲಿ ಕುಳಿತಂತೆ ರೌಂಡ್ ಟೇಬಲ್ ಇರುತ್ತೆ. ಎಲ್ಲಾ ರೀತಿಯ ಕೆಂಪು ಹೂಗಳನ್ನ ಬಳಸಿದ್ದೇವೆ. ಇಂಡೋ ವೆಸ್ಟರ್ನ್ ಶೈಲಿಯಲ್ಲಿ ವೇದಿಕೆ ಇದೆ ಎಂದು ಇವೆಂಟ್‌ ಮ್ಯಾನೇಜರ್‌ ಕಿರಣ್‌ ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿದ್ದಾರೆ. ಸುಧೀರ್ ಕುಟುಂಬದ ಮದುವೆ ಆಗಿರೋದ್ರಿಂದ ಅವರ ನೆನಪು ಹೇಳುವ ಫೋಟೋಗಳನ್ನೂ ಹಾಕಿದೀವಿ ಎಂದು ಕಿರಣ್‌ ಹೇಳಿದ್ದಾರೆ.