ಕಾಲಿವುಡ್‌ಗೆ ದಳಪತಿ ವಿಜಯ್ ಪುತ್ರನ ಎಂಟ್ರಿ!

ಕಾಲಿವುಡ್‌ನ ಸೂಪರ್ ಸ್ಟಾರ್ ಆಗಿ ಮಿರ ಮಿರ ಅಂತಾ ಮಿಂಚ್ತಿರೋ ಖ್ಯಾತ ನಟ ದಳಪತಿ ವಿಜಯ್ ನಟನೆಯ `ಬೀಸ್ಟ್’ ಚಿತ್ರ ರಿಲೀಸ್ ಆಗಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಇದರ ಮಧ್ಯೆ ಹೊಸ ವಿಚಾರವೊಂದು ಸಿನಿಗಲ್ಲಿಯಲ್ಲಿ ಸೌಂಡ್ ಮಾಡ್ತಿದೆ. ಸೂಪರ್‌ಸ್ಟಾರ್ ದಳಪತಿ ವಿಜಯ್ ಪುತ್ರ ಸಂಜಯ್ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

ತಮಿಳು ಚಿತ್ರರಂಗದಲ್ಲಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ನಾನಾ ಪಾತ್ರಗಳ ರಂಜಿಸಿ ಸೈ ಎನಿಸಿಕೊಂಡಿದ್ದಾರೆ. `ಬೀಸ್ಟ್’ ಚಿತ್ರದ ಕುರಿತು ಸಿಕ್ಕಾಪಟ್ಟೆ ಸುದ್ದಿಯಲ್ಲಿರಬೇಕಾದ್ರೆ, ದಳಪತಿ ವಿಜಯ್ ಮಗ ಸಂಜಯ್, ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದರ ಕುರಿತು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಈ ವಿಷ್ಯವಾಗಿ ದಳಪತಿ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಇಂಡಸ್ಟ್ರಿಗೆ ವಿಜಯ್ ಮಗನ ಎಂಟ್ರಿಯಾಗುತ್ತೆ ಅಂತಾ ಭಾರೀ ಚರ್ಚೆ ಆಗ್ತಿತ್ತು. ಅದಕ್ಕೆ ಪೂರಕವೆನ್ನುವಂತೆ ಸಾಕಷ್ಟು ಕಥೆಗಳು ವಿಜಯ್ ಪುತ್ರ ಸಂಜಯ್‌ರನ್ನ ಅರಸಿ ಬಂದಿತ್ತು. `ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ ಪುತ್ರೇನ್ ಒಮ್ಮೆ ವಿಜಯ್‌ರನ್ನ ಸಂಪರ್ಕಿಸಿ ಕಥೆ ಹೇಳಾಗಿತ್ತಂತೆ, ಕಥೆ ಕೇಳಿ ಇಷ್ಟಪಟ್ಟಿದ್ರಂತೆ ವಿಜಯ್, ಆದರೆ ಆ ಕಥೆಯನ್ನ ಸಂಜಯ್‌ಗಾಗಿ ಸಿದ್ಧಪಡಿಸಿದ್ರಂತೆ.

ನಂತರ ಸಂಜಯ್ ಚಿತ್ರರಂಗಕ್ಕೆ ಬರೋದಕ್ಕೆ ಸ್ವಲ್ವ ಸಮಯ ಬೇಕು ಅಂತಾ ನಿರ್ದೇಶಕ ಅಲ್ಫೋನ್ಸ್ಗೆ ತಿಳಿಸಿದ್ರಂತೆ. ಚಿತ್ರರಂಗಕ್ಕೆ ಬರೋದು ಸಂಜಯ್‌ಗೆ ಬಿಟ್ಟಿದ್ದು, ಪುತ್ರ ಸಂಜಯ್‌ಗೆ ಯಾವ ಕ್ಷೇತ್ರದಲ್ಲಿ ಬೆಳೆಯಲು ಇಷ್ಟವೋ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ `ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಕೆಜಿಎಫ್ 2 ಚಿತ್ರಕ್ಕೆ ಪೈರಸಿ ಶಾಕ್

ಇನ್ನು ಪುತ್ರ ವಿಜಯ್ ಕೂಡ ಒಂದೊಳ್ಳೆ ಗಟ್ಟಿ ಕಥೆಯ ಮೂಲಕ ಕಾಲಿವುಡ್ ರಂಗಕ್ಕೆ ಬರಲು ತೆರೆಮರೆಯಲ್ಲಿ ಸಿಧ್ಧತೆ ನಡೆಸುತ್ತಿದ್ದಾರೆ. ಒಂದೊಳ್ಳೆ ಪಾತ್ರದ ಮೂಲಕ ಸಂಜಯ್ ಸ್ಕ್ರೀನ್‌ಗೆ ಶೇರ್ ಮಾಡೋದು ಗ್ಯಾರೆಂಟಿ. ಒಟ್ನಲ್ಲಿ ಈ ಶುಭ ಸುದ್ದಿ ಕೇಳಿ ದಳಪತಿ ವಿಜಯ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *