ಗುಂಡಿನ ದಾಳಿಗೆ 21 ಬಲಿ ಪ್ರಕರಣದ ಬೆನ್ನಲ್ಲೇ ರೈಫಲ್ ಹಿಡಿದು ಕಾಣಿಸಿಕೊಂಡ ಮತ್ತೊಬ್ಬ ವಿದ್ಯಾರ್ಥಿ

ವಾಷಿಂಗ್ಟನ್: ನಿನ್ನೆ ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿ ವಿದ್ಯಾರ್ಥಿ ಶೂಟೌಟ್ ನಡೆಸಿ ತಾನೂ ಮೃತಪಟ್ಟಿದ್ದ. ಶೂಟೌಟ್‍ಗೆ 18 ವಿದ್ಯಾರ್ಥಿಗಳು ಹಾಗೂ ಇತರೆ 3 ಮಂದಿ ಬಲಿ ಆಗಿದ್ದರು. ಇದು ನಡೆದ ಮಾರನೇ ದಿನವೇ ಅದೇ ಶಾಲೆಯ ಮುಂದೆ ಮತ್ತೊಬ್ಬ ವಿದ್ಯಾರ್ಥಿ ರೈಫಲ್‍ನೊಂದಿಗೆ ಕಾಣಿಸಿಕೊಂಡು ಭೀತಿ ಮೂಡಿಸಿದ ಘಟನೆ ನಡೆದಿದೆ.

ರೈಫಲ್ ಹಿಡಿದು ನಿಂತಿದ್ದ ವಿದ್ಯಾರ್ಥಿಯನ್ನು ಗಮನಿಸಿದ ಪೊಲೀಸರು ತಕ್ಷಣ ಆತನನ್ನು ಬಂಧಿಸಿದ್ದಾರೆ.

ನಿನ್ನೆ ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿಯಿಂದ ಸಾಮೂಹಿಕ ಶೂಟೌಟ್ ನಡೆದಿತ್ತು. ಘಟನೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಶೂಟೌಟ್ ನಡೆಸಿದ ದಾಳಿಕೋರನನ್ನು ಪೋಲಿಸರು ಕೂಡ ಹತ್ಯೆಗೈದಿದ್ದರು. ಇದನ್ನೂ ಓದಿ: ಶೂಟೌಟ್‍ಗೂ ಮೊದಲೇ ಇನ್‍ಸ್ಟಾಗ್ರಾಮ್‍ನಲ್ಲಿ ಗನ್‍ಗಳ ಚಿತ್ರ ಪೋಸ್ಟ್ ಮಾಡಿದ್ದ ಆರೋಪಿ

2012ರಲ್ಲಿ ಕನೆಕ್ಟಿಕಟ್‍ನ ನ್ಯೂಟೌನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ದಾಳಿ ನಂತರ ಎಲಿಮೆಂಟ್ರಿ ಶಾಲೆಯೊಂದರಲ್ಲಿ ನಡೆದ ಭೀಕರ ದಾಳಿ ಇದು ಎಂದು ಇಂಟರ್‍ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ

ಈ ಹಿಂದೆ ಅಮೆರಿಕಾದಲ್ಲಿ ಬಂದೂಕುಧಾರಿಯೊಬ್ಬ ಚಿಕಾಗೋ ಪ್ರದೇಶದಲ್ಲಿ ದಾರಿಹೋಕರ ಮೇಲೆ ಗುಂಡು ಹಾರಿಸಿ ಇಬ್ಬರನ್ನು ಕೊಂದಿದ್ದ.

ಉವಾಲ್ಡೆಯ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಮಂಗಳವಾರ ನಡೆದ ದಾಳಿಯಲ್ಲಿ ಶೂಟರ್, ಸಾಲ್ವಡಾರ್ ರಾಮೋಸ್ (18) ಏರ್-15 ಬಂದೂಕನ್ನು ಬಳಸಿದ್ದಾನೆ ಎಂದು ಗವರ್ನರ್ ಗ್ರೆಗ್ ಅಬ್ಬೋಟ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *