ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

– 13 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರುವಾಗಿದೆ. ಎಲಾನ್‌ ಮಸ್ಕ್‌ ಮತ್ತು ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ನೇಮಕಾತಿ ಆರಂಭವಾಗಿದ್ದು, 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮಸ್ಕ್ ಅವರ ಎಲೆಕ್ಟ್ರಿಕ್ ವೆಹಿಕಲ್ (ಇವಿ) ದೈತ್ಯ ಟೆಸ್ಲಾ Inc. ಭಾರತದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಟೆಸ್ಲಾ ಸಲಹೆಗಾರ, ಇನ್ಸೈಡ್‌ ಸೇಲ್ ಅಡ್ವೈಸರ್, ಕಸ್ಟಮರ್‌ ಸಪೋರ್ಟ್‌ ಸ್ಪೆಷಲಿಸ್ಟ್‌, ಕನ್ಸ್ಯೂಮರ್‌ ಎಂಗೇಜ್‌ಮೆಂಟ್‌ ಮ್ಯಾನೇಜರ್, ಆರ್ಡರ್‌ ಆಪರೇಷನ್ಸ್‌ ಸ್ಪೆಷಲಿಸ್ಟ್‌, ಸರ್ವೀಸ್‌ ಮ್ಯಾನೇಜರ್, ಬಿಸಿನೆಸ್‌ ಆಪರೇಷನ್ಸ್‌ ಅನಾಲಿಸ್ಟ್‌, ಸ್ಟೋರ್‌ ಮ್ಯಾನೇಜರ್, ಪಾರ್ಟ್ಸ್‌ ಅಡ್ವೈಸರ್, ಸರ್ವೀಸ್‌ ಅಡ್ವೈಸರ್‌, ಡೆಲಿವರಿ ಆಪರೇಷನ್ಸ್‌ ಸ್ಪೆಷಲಿಸ್ಟ್‌ ಮತ್ತು ಕಸ್ಟಮರ್‌ ಸಪೋರ್ಟ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಆಮದು ಸುಂಕದ ಕಳವಳದಿಂದಾಗಿ EV ತಯಾರಕರು ಇಲ್ಲಿಯವರೆಗೆ ಭಾರತದಿಂದ ದೂರ ಉಳಿದಿದ್ದರು.