ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಯೋಧರು, ಉಗ್ರರ ನಡುವೆ ಗುಂಡಿನ ಚಕಮಕಿ- ಓರ್ವ ಮಹಿಳೆ ಸಾವು

ಶ್ರೀನಗರ: ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ನಾಗರೀಕರಿಗೆ ಗಾಯವಾಗಿರುವ ಘಟನೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ.

ಗುಂಡಿನ ದಾಳಿಗೆ ಬಲಿಯಾದ ಮಹಿಳೆಯನ್ನು 44 ವರ್ಷದ ತಾಹಿರಾ ಬೇಗಂ ಎಂದು ಗುರುತಿಸಲಾಗಿದೆ. ಜಮ್ಮು-ಕಾಶ್ಮೀರದ ಬ್ಯಾಟ್ಪೊರಾ ಗ್ರಾಮದ ಮನೆಯೊಂದರಲ್ಲಿ ಮೂವರು ಉಗ್ರರು ಅಡಗಿರುವ ಮಾಹಿತಿ ಪಡೆದ ಭದ್ರತಾ ಪಡೆ ಇಂದು ಉಗ್ರರ ಸೆರೆಗಾಗಿ ಕಾರ್ಯಾಚರಣೆ ನಡೆಸಿದ್ದು, ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.

ಕಾಶ್ಮೀರದ ಪೊಲೀಸ್ ಅಧಿಕಾರಿ ಫೆರೋಜ್ ಅಹಮದ್ ದಾರ್ ಸೇರಿದಂತೆ ಐವರು ಪೊಲೀಸರ ಹತ್ಯೆಯ ಹಿಂದಿದ್ದಾನೆ ಎನ್ನಲಾದ ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರ ಬಶೀರ್ ಲಷ್ಕರಿ ಆ ಮನೆಯಲ್ಲಿ ಅಡಗಿದ್ದಾನೆ ಎಂದು ಯೋಧರಿಗೆ ಮಾಹಿತಿ ಸಿಕ್ಕಿತ್ತು. ಲಷ್ಕರಿ ಹಾಗೂ ಆತನ ಮತ್ತೊಬ್ಬ ಸಹಚರ ಇನ್ನೂ ಮನೆಯಲ್ಲೇ ಅಡಗಿರುವುದಾಗಿ ವರದಿಯಾಗಿದೆ.

ಶೋಧ ಕಾರ್ಯಾರಚಣೆ ವೇಳೆ ಉಗ್ರರು ಅಲ್ಲಿನ ನಿವಾಸಿಗಳನ್ನು ಮಾನವ ರಕ್ಷೆಯಾಗಿ ಬಳಸಿ ಗುಂಡಿನ ದಾಳಿ ಆರಂಭಿಸಿದ ಪರಿಣಾಮ ತಾಹಿರಾ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ 17 ನಿವಾಸಿಗಳನ್ನ ಮನೆಯಿಂದ ಸ್ಥಳಾಂತರಿಸಲಾಗಿದ್ದು, ಭದ್ರತಾ ಪಡೆಯ ಕಾರ್ಯಾಚರಣೆ ಮುಂದುವರೆದಿದೆ.

Comments

Leave a Reply

Your email address will not be published. Required fields are marked *