ಜಮ್ಮು-ಕಾಶ್ಮೀರ| ಕಾರ್ಮಿಕನ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ

– ಒಂದೇ ವಾರದಲ್ಲಿ ಮೂರನೇ ದಾಳಿ

ಶ್ರೀನಗರ: ಜಮ್ಮು (Jammu) ಮತ್ತು ಕಾಶ್ಮೀರದ (Kashmir) ತ್ರಾಲ್‌ನಲ್ಲಿ ವಲಸೆ ಕಾರ್ಮಿಕನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಒಂದೇ ವಾರದಲ್ಲಿ ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದ್ದು, ಕಾರ್ಮಿಕರು ಆತಂಕದಲ್ಲಿದ್ದಾರೆ.

ಭಯೋತ್ಪಾದಕರು ಉತ್ತರ ಪ್ರದೇಶದ (Uttar Pradesh) ಬಿಜ್ನೋರ್ ಮೂಲದ ಶುಭಂ ಕುಮಾರ್ ಮೇಲೆ ದಾಳಿ ನಡೆಸಿದ್ದಾರೆ. ತ್ರಾಲ್‌ನ ಬಟಗುಂಡ್ ಗ್ರಾಮದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ ಬಳಿಕ ಶುಭಂ ಕುಮಾರ್ ಕೈಗೆ ಗಾಯಗಳಾಗಿವೆ. ಗಾಯಾಳು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇದನ್ನೂ ಓದಿ: ಸಿಜೆಐ ಸೋಗಿನಲ್ಲಿ ವೃದ್ಧನಿಗೆ 1.26 ಕೋಟಿ ವಂಚನೆ – ನಾಲ್ವರು ಆರೋಪಿಗಳ ಬಂಧನ

ಅ.20ರಂದು ಗಂಡರ್ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದ ನಿರ್ಮಾಣ ಸ್ಥಳದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ ಒಬ್ಬ ವೈದ್ಯ ಮತ್ತು ಆರು ವಲಸೆ ಕಾರ್ಮಿಕರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದರು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಅಂಗಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಇದನ್ನೂ ಓದಿ: ಪರಿಷತ್‌ ಉಪ ಚುನಾವಣೆ| ಬಿಜೆಪಿಯ ಕಿಶೋರ್ ಕುಮಾರ್‌ಗೆ ಭರ್ಜರಿ ಜಯ

ಅ.18 ರಂದು ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರು ಬಿಹಾರದ ವಲಸೆ ಕಾರ್ಮಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದನ್ನೂ ಓದಿ: ಪೂಜಾ ಕೈಂಕರ್ಯದೊಂದಿಗೆ ಹಾಸನಾಂಬೆ ಗರ್ಭಗುಡಿ ಓಪನ್ – ನ.3ಕ್ಕೆ ಜಾತ್ರಾ ಮಹೋತ್ಸವ