– ಬೆಂಗಳೂರಿನ ನಕ್ಷೆಯನ್ನು ಕಾಶ್ಮೀರಕ್ಕೆ ಕಳುಹಿಸಿದ್ದ
– ತಮಿಳುನಾಡಿನ ವೆಲ್ಲೂರಿನಲ್ಲಿ ಮತ್ತೊಬ್ಬ ಸೆರೆ
ಬೆಂಗಳೂರು: ಹಿಂದೂಗಳು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಇದರಿಂದ ನಮಗೆ ನೆಮ್ಮದಿ ಹಾಳಾಗಿದೆ. ಹೀಗಾಗಿ ಉಗ್ರರ ಗುಂಪಿಗೆ ಸೇರಲು ಬಯಸಿದ್ದೆ ಎಂದು ತಿಲಕ್‍ನಗರದಲ್ಲಿ ಅರೆಸ್ಟ್ ಆಗಿರುವ ಆಲ್‍ಖೈದಾ ಶಂಕಿತ ಉಗ್ರ ಅಖ್ತರ್ ಹುಸೇನ್ ಆಘಾತಕಾರಿ ಅಂಶಗಳನ್ನು ಬಾಯಿಬಿಟ್ಟಿದ್ದಾನೆ.
ಸಿಸಿಬಿ ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಹುಸೇನ್ ಮೊಬೈಲ್‍ನಲ್ಲಿ 20 ಜಿಬಿಯಷ್ಟು ಡೇಟಾ ಪತ್ತೆಯಾಗಿದ್ದು, ಆತ ಉಗ್ರ ಚಟುವಟಿಕೆಗಳ ಬಗ್ಗೆ ಚಾಟ್, ಪೋಸ್ಟ್‌ಗಳನ್ನು ಮಾಡಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಉಗ್ರರ ಸಂಪರ್ಕ ಹೇಗೆ?
ಮುಸ್ಲಿಂ ಸಮುದಾಯದ ಮೇಲೆ ಭಾರತದಲ್ಲಿ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಪೋಸ್ಟ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಕಾಶ್ಮೀರ ಆಜಾದಿ ಹಾಗೂ ದೇಶ ವ್ಯಾಪ್ತಿ ಷರಿಯತ್ ಕಾನೂನು (ಮುಸ್ಲಿಂ ವೈಯಕ್ತಿಕ ಕಾನೂನು) ಜಾರಿಯಾಗಬೇಕು ಎಂದು ನಿರಂತರವಾಗಿ ಪೋಸ್ಟ್ ಹಾಕುತ್ತಿದ್ದ.
ಈ ಪೋಸ್ಟ್‌ಗಳಿಂದ ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಆಲ್‌ಖೈದಾ ಸಂಘಟನೆಯ ಪ್ರಮುಖರು ಸಂಪರ್ಕ ಸಾಧಿಸಿದ್ದಾರೆ. ನಂತರ ಆತನಿಗೆ ಜಿಹಾದಿ ಬೋಧಿಸಿದ ಆಲ್‌ಖೈದಾ ಸಂಘಟನೆಯ ನೇಮಕಾತಿ ಜಾಲದ ಸದಸ್ಯರು, ಭಾರತದಲ್ಲಿ ಮುಸ್ಲಿಂ ಸಮುದಾಯಕ್ಕೆ ಆತಂಕವಿದೆ ಎ೦ದು ತಲೆ ಕೆಡಿಸಿದ್ದಾರೆ. ಉಗ್ರ ಸಂಘಟನೆಯ ಸಂಪರ್ಕವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರದ ಬಗ್ಗೆ ಮತ್ತಷ್ಟು ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದ.
3 ಮೊಬೈಲ್‍ಗಳನ್ನು ಈ ಕೃತ್ಯಕ್ಕೆ ಬಳಸಿದ್ದು, ಬೆಂಗಳೂರಿನ ಇಂಚಿಂಚೂ ಮಾಹಿತಿಯನ್ನು ಮೊಬೈಲ್‍ನಲ್ಲಿ ಇಟ್ಟಿದ್ದ. ಡೆಲಿವರಿ ಬಾಯ್ ಆಗಿದ್ದರಿಂದ ಬೆಂಗಳೂರಿನ ಬಹುತೇಕ ಜಾಗಗಳನ್ನು ನೋಡಿದ್ದ. ಅವುಗಳ ಮ್ಯಾಪ್ ಕೂಡ ಸಿದ್ಧ ಮಾಡಿಕೊಂಡು, ಎಲ್ಲೆಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಬಹುದು ಅಎಂಬ ಬ್ಲೂ ಪ್ರಿಂಟ್ ಒಂದನ್ನ ಕಾಶ್ಮೀರಕ್ಕೆ ಕಳಿಸಿಕೊಟ್ಟ ಬಗ್ಗೆ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಆ ಮೊಬೈಲ್‍ಗಳನ್ನು ರಿಟ್ರೀವ್‍ಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‍ಎಸ್‍ಎಲ್) ಕಳುಹಿಸಲಾಗಿದೆ. ಇದನ್ನೂ ಓದಿ: ಮೋದಿ-ಯೋಗಿಗೆ ಕುಟುಂಬವಿಲ್ಲ, ಆದರೆ ನಮಗಿದೆ: ಉಮೇಶ್ ಕತ್ತಿ
ಆಲ್ ಖೈದಾ ಉಗ್ರ ಸಂಘಟನೆ ಸೇರಿದಂತೆ ಬೇರೆ ಬೇರೆ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಮಧ್ಯೆ, ಅಖ್ತರ್ ಹುಸೇನ್ ಮಾಹಿತಿ ಮೇರೆಗೆ ತಮಿಳುನಾಡಿನ ವೆಲ್ಲೂರು ಬಳಿ ಮತ್ತೊಬ್ಬ ಶಂಕಿತ ಉಗ್ರ ಜುಬಾ ಅಬ್ದುಲ್ ಅಲಿ ಮಂಡಲ್ ಎಂಬಾತನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ ಕರೆ ತಂದಿದ್ದಾರೆ.

ಯಾರು ಅಖ್ತರ್ ಹುಸೇನ್?
ಅಸ್ಸಾಂ ಮೂಲದ ಹುಸೇನ್ ಉದ್ಯೋಗಕ್ಕಾಗಿ 2015ರಲ್ಲಿ ಬೆಂಗಳೂರಿಗೆ ಬಂದಿದ್ದ. ಮೊದಲಿಗೆ ಕನಕಪುರ ರಸ್ತೆಯ ಮಯಾಸ್‍ನಲ್ಲಿ ಕೆಲಸಕ್ಕೆ ಸೇರಲು ಹೋದಾಗ ಕೇವಲ 17 ವರ್ಷವಾಗಿದ್ದ ಕಾರಣ ಕೆಲಸ ಸಿಕ್ಕಿರಲಿಲ್ಲ. ಬಳಿಕ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ, ಅಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಕೆಲಸ ಬಿಟ್ಟಿದ್ದ.
ಬಳಿಕ ಗಾರ್ಮೆಂಟ್ಸ್ ಒಂದರಲ್ಲಿ 3 ತಿಂಗಳು ಕೆಲಸ ಮಾಡಿದ್ದಾನೆ. ಅಲ್ಲಿ ಮಾರ್ಕ್ಸ್ ಕಾರ್ಡ್ ಕೇಳಿದ್ದಾರೆ ಎಂಬ ಕಾರಣಕ್ಕೆ ಪಿಯುಸಿ ಓದಲು ಮತ್ತೆ ಅಸ್ಸಾಂಗೆ ಹೋಗಿ 2017ರ ನವೆಂಬರ್‌ನಲ್ಲಿ ವಾಪಸ್ ಆಗಿದ್ದ. ರಾತ್ರಿ ಹೊತ್ತು ಮಾತ್ರ ಫುಡ್ ಡೆಲಿವರಿ ಕೆಲಸ ಮಾಡ್ತಿದ್ದ ಅಖ್ತರ್ ಉಳಿದ ಸಮಯದಲ್ಲಿ ವಿವಿಧ ಉಗ್ರ ಸಂಘಟನೆಗಳ ಮುಖ್ಯಸ್ಥರ ಭಾಷಣಗಳನ್ನು ಕೇಳಲು ಶುರುಮಾಡಿದ್ದ. ಆ ಭಾಷಣಗಳಿಂದ ಪ್ರೇರೇಪಿತನಾಗಿ, ಉಗ್ರ ಸಂಘಟನೆ ಸೇರೋಕೆ ತೀರ್ಮಾನ ಮಾಡಿದ್ದ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Leave a Reply