ತಿರುವನಂತಪುರಂ: ಕೇರಳದ 10 ವರ್ಷದ ಫುಟ್ಬಾಲ್ ಆಟಗಾರ ಝೀರೋ ಆ್ಯಂಗಲ್ ಗೋಲ್ ಹೊಡೆಯುವ ಮೂಲಕ ಫುಟ್ಬಾಲ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.
ಕೇರಳದ ಫುಟ್ಬಾಲ್ ಆಟಗಾರ ಡ್ಯಾನಿ ಗೋಲ್ ದಾಖಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಡ್ಯಾನಿ ತಾಯಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಮಾಜಿ ಫುಟ್ಬಾಲ್ ಆಟಗಾರ ಐ.ಎಂ.ವಿಜಯನ್ ಕೂಡ ವಿಡಿಯೋ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೀನಂಗಡಿಯಲ್ಲಿ ಆಲ್ ಕೇರಳ ಕಿಡ್ಸ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯ ಫೆಬ್ರವರಿ 9ರಂದು ನಡೆದಿತ್ತು. ಈ ಪಂದ್ಯದಲ್ಲಿ ಕೇರಳ ಫುಟ್ಬಾಲ್ ತರಬೇತಿ ಕೇಂದ್ರ (ಕೆಎಫ್ಟಿಸಿ) ಪರ ಆಡಿದ ಡ್ಯಾನಿ ಹ್ಯಾಟ್ರಿಕ್ ಗೋಲ್ ಗಳಿಸಿದರು.
ಟೂರ್ನಿಯಲ್ಲಿ ಡ್ಯಾನಿ 13 ಗೋಲು ಗಳಿಸಿದ್ದು, ಅವರನ್ನು ಟೂರ್ನಿಯ ಶ್ರೇಷ್ಠ ಆಟಗಾರ ಎಂದು ಆಯ್ಕೆ ಮಾಡಲಾಯಿತು. ವಿಡಿಯೋವನ್ನು ನೋಡಿದ ನೆಟ್ಟಿಗರು, ಬಾಲಕ ಡ್ಯಾನಿ ಅವರನ್ನು ಅರ್ಜೆಂಟೀನಾದ ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗೆ ಹೋಲಿಸಿದ್ದಾರೆ.

ಐ.ಎಂ.ವಿಜಯನ್ ಅವರು ಟ್ವೀಟ್ ಮಾಡಿದ ಬಾಲಕ ಡ್ಯಾನಿ ವಿಡಿಯೋವನ್ನು 20,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 490ಕ್ಕೂ ಹೆಚ್ಚು ಜನರು ರಿಟ್ವೀಟ್ ಮಾಡಿದ್ದಾರೆ. ಜೊತೆಗೆ ನೆಟ್ಟಿಗರು ಡ್ಯಾನಿಯನ್ನು ಹೊಗಳಿದ್ದಾರೆ. ಭಾರತೀಯ ಫುಟ್ಬಾಲ್ಗೆ ಇದರ ಬಗ್ಗೆ ಹೆಚ್ಚು ಪ್ರಜ್ಞೆ ಇಲ್ಲ. ಬಹುಶಃ ಅವರು ಈ ವೀಡಿಯೊವನ್ನು ನೋಡುವ ಮೂಲಕ ಸ್ಫೂರ್ತಿ ಪಡೆದುಕೊಳ್ಳುತ್ತಾರೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
https://twitter.com/IMVijayan1/status/1227129072322375680

Leave a Reply